Header Ads
Header Ads
Breaking News

ಡಾ. ರಾಜ್ ಸಂಘಟನೆಯ ವತಿಯಿಮದ ಕನ್ನಡ ರಾಜ್ಯೋತ್ಸವ : ಕುಂದಾಪುರ ಠಾಣಾಧಿಕಾರಿ ಹರೀಶ್‌ರಿಂದ ಕನ್ನಡ ಧ್ವಜಾರೋಹಣ

ಕುಂದಾಪುರ ತಾಲೂಕಿನಲ್ಲಿ ಕನ್ನಡಾಭಿಮಾನದ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಡಾ. ರಾಜ್ ಸಂಘಟನೆಯವರು ಕನ್ನಡ ರಾಜ್ಯೋತ್ಸವವನ್ನು ಕುಂದಾಪುರ ಹೊಸ ಬಸ್ ನಿಲ್ದಾಣದಲ್ಲಿ ಸಂಭ್ರಮದಿಂದ ಆಚರಿಸಿದರು. ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ಮಾತನಾಡಿ, ಭಾರತವು ಅತೀ ದೊಡ್ಡ ನಾಗರೀಕತೆ ಹೊಂದಿದ್ದು ಅದರಲ್ಲಿ ಎರಡೂವರೆ ಸಾವಿರ ವರ್ಷ ಇತಿಹಾಸವುಳ್ಳ ಕರ್ನಾಟಕವನ್ನು ಹಲವಾರು ರಾಜವಂಶಗಳು ಆಳ್ವಿಕೆ ನಡೆಸಿದ್ದಾರೆ. ಆ ಅವಧಿಯಲ್ಲಿ ಕಲೆ-ಸಾಹಿತ್ಯ ಮೊದಲಾದ ಕೊಡುಗೆಗಳನ್ನು ನಾಡಿಗೆ ನೀಡಿರುವುದನ್ನು ಸ್ಮರಿಸಬಹುದು ಎಂದು ಹೇಳಿದರು. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಅಖಂಡ ಕರ್ನಾಟಕ ಕಲ್ಪನೆಯ ಹೋರಾಟಗಾರನ್ನು ನೆನಪಿಸಿಕೊಂಡು ಅವರ ಸನ್ನಡೆತೆಗಳನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ಭಾಷೆ ಉಳಿವು ಮತ್ತು ಏಳಿಗೆಗಾಗಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದರು. ಈ ಸಂದರ್ಭ ಡಾ. ರಾಜ್ ಸಂಘಟನೆ ಅಧ್ಯಕ್ಷ ರತ್ನಾಕರ ಪೂಜಾರಿ, ಉದ್ಯಮಿಗಳಾದ ಅಜೇಂದ್ರ ಶೆಟ್ಟಿ, ಮುಸ್ತಾಫ, ಸಂಘಟನೆಯ ಪ್ರಮುಖರಾದ ಸುನೀಲ್ ಖಾರ್ವಿ, ಸಚಿನ್,ಪ್ರಭಾಕರ ಖಾರ್ವಿ, ಅಗಸ್ಟೀನ್ ಡಿಸೋಜ, ರಾಯ್ಸನ್ ಡಿಸೋಜಾ, ಗಣೇಶ್, ನವೀನ್, ಹಾಗೂ ಮತ್ತಿತರರು ಉಪ್ಥಿತರಿದ್ದರು.

Related posts

Leave a Reply

Your email address will not be published. Required fields are marked *