Header Ads
Header Ads
Breaking News

ಡಿಕೆಶಿಗೆ ಈಗಲಾದರೂ ತನ್ನ ತಪ್ಪಿನ ಅರಿವಾಗಿದೆ: ಉಡುಪಿಯಲ್ಲಿ ಮಾಜಿ ಸಿಎಂ ಬಿಎಸ್‌ವೈ ಹೇಳಿಕೆ

ಈಗಲಾದ್ರೂ ಡಿಕೆ ಶಿವಕುಮಾರ್‌ಗೆ ತಪ್ಪಿನ ಅರಿವಾಗಿರೋದು ಸಂತೋಷದ ಸಂಗತಿ. ವೀರಶೈವ- ಲಿಂಗಾಯತ ಅಂತ ಗೊಂದಲ ಮಾಡಿ ಹಿನ್ನಡೆಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆ ಜಾತಿ- ಧರ್ಮದ ವಿಚಾರದಲ್ಲಿ ಗೊಂದಲ ಮಾಡೋದು ಬಿಡಿ ಅಂತ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗ ಉಪಚುನಾವಣೆಯ ಪ್ರಚಾರಕ್ಕೆ ಬೈಂದೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜಕೀಯ ಮಾಡೋಣ ಆದರೆ ಜಾತಿ ಮತ್ತು ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು. ಜಾತಿ ಒಡೆದು ಕಾಂಗ್ರೇಸ್ ಕೈಸುಟ್ಟುಕೊಂಡಿದೆ. ಇನ್ನು ಎಂ.ಬಿ.ಪಾಟೀಲ್, ಕುಲಕರ್ಣಿ ಹೇಳಿಕೆಗಳಿಗೆ ಉತ್ತರಿಸಲು ಬಿ.ಎಸ್.ವೈ ನಿರಾಕರಿಸಿದರು.

Related posts

Leave a Reply