Header Ads
Header Ads
Breaking News

ಡಿಕೆಶಿ ಆಪ್ತನ ಮನೆಯಿಂದ ದಾಖಲೆ ರವಾನೆ

 

ಬೆಂಗಳೂರು: ಡಿ.ಕೆ.ಶಿವಕುಮಾರ್ ಗಳಿಸಿರುವ ಆಸ್ತಿಯ ಮೂಲದ ಪರಿಶೀಲನೆ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಐಟಿ ಅಧಿಕಾರಿಗಳು ಇಂದು ಮುಂಜಾನೆ ಮತ್ತೆ ತನಿಖೆ ಚುರುಕುಗೊಳಿಸಿದ್ದಾರೆ. ಡಿಕೆಶಿ ಆಪ್ತ ಜ್ಯೋತಿಶಿಯ ಮನೆಯಿಂದ ಹಲವು ದಾಖಲೆಗಳನ್ನು ರವಾನಿಸಿದ್ದಾರೆ.
ಇಂದು ಮುಂಜಾನೆ ೩:೩೦ರ ಹೊತ್ತಿಗೆ ದ್ವಾರಕಾನಾಥ ಮನೆಯಿಂದ ಮೂರು ಸೂಟ್‌ಕೇಸ್ ತುಂಬ ದಾಖಲೆ ಹೊತ್ತೊಯ್ದ ಐಟಿ ಅಧಿಕಾರಿಗಳು ೫:೩೦ರ ಹೊತ್ತಿಗೆ ಡಿಕೆಶಿ ಮನೆಯಿಂದ ದಾಖಲೆಗಳನ್ನು ಸಾಗಿಸಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ೨ ಸಾವಿರ ಕೋಟಿ ರೂ.ಮೌಲ್ಯದ ಆಸ್ತಿಯ ದಾಖಲೆ ಸಿಕ್ಕಿದೆ.
ಜ್ಯೋತಿಶಿ ದ್ವಾರಕನಾಥ ಕೇವಲ ಡಿಕೆಶಿಗೆ ಮಾತ್ರ ಆಪ್ತನಲ್ಲ, ಹಲವು ಚಿತ್ರನಟರು, ರಾಜಕಾರಣಿಗಳಿಗೂ ಭವಿಷ್ಯ ಹೇಳುತ್ತಿದ್ದ. ಈಗ ಅವನ ಭವಿಷ್ಯವೇ ಡೋಲಾಯಮಾನ ಆಗಿದೆ.
ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ತಮ್ಮ ಸುರಕ್ಷೆಗಾಗಿ ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಡಿಕೆಶಿ ಮನೆಯ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಸಾಕಷ್ಟು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳೂ ಸುರಕ್ಷೆಗೆ ನಿಂತಿದ್ದಾರೆ. ಡಿಕೆಶಿ ಮನೆ ಎದುರು ಜಮಾಯಿಸಿರುವ ಅವರ ಆಪ್ತರು, ಬೆಂಬಲಿಗರು, ಅಭಿಮಾನಿಗಳು ಮನೆಯ ಹತ್ತಿರ ಬಾರದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ.

Related posts

Leave a Reply