Header Ads
Header Ads
Breaking News

ಡಿಕೆಶಿ ಬಿಡುಗಡೆಗೆ ಯಾಕೆ ವಿಜಯೋತ್ಸವ : ಸಂಸದೆ ಶೋಭಾ ಕರಂದ್ಲಾಜೆ ಟೀಕೆ

ಡಿಕೆಶಿ ಬಿಡುಗಡೆಗೆ ಸಿದ್ದರಾಮಯ್ಯ ಯಾಕೆ ವಿಜಯೋತ್ಸವ ಆಚರಿಸಬೇಕು… ಅವರು ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲು ಪಾಲಾಗಿ ಹೊರಬಂದವರಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಡಿಕೆಶಿ ಅವರ ಇನ್ನೂ ಅನೇಕ ಕೇಸುಗಳು ತನಿಖಾ ಹಂತದಲ್ಲಿದೆ. ಕೋರ್ಟ್‌ನಲ್ಲಿ ವಿಚಾರಣೆ ನಡಿತಾ ಇದೆ. ಡಿಕೆಶಿ ಅವರ ಕೇಸುಗಳ ವಿಚಾರಣೆ ಮೊದಲು ಮುಗೀಲಿ. ಡಿಕೆಶಿ ಚುನಾವಣಾ ರಾಜಕೀಯಕ್ಕೆ ನಂತರ ಬರಲಿ ಎಂದರು.

ಸಾವರ್ಕರ್‌ಗೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಸಿದ್ದರಾಮಯ್ಯ ದೇಶದ ಜನತೆಯ ಕ್ಷಮೆ ಯಾಚಿಸಬೇಕು. ಸಾವರ್ಕರ್ ಕುಟುಂಬವೇ ದೇಶಕ್ಕಾಗಿ ತ್ಯಾಗ ಮಾಡಿದೆ. ಸಿದ್ದರಾಮಯ್ಯಗೆ ಓಟು, ಜಾತಿ ಧರ್ಮ ಮಾತ್ರ ಕಾಣುತ್ತೆ. ನಮಗೆ ಸಾವರ್ಕರ್ ಅವರ ತ್ಯಾಗ ಮುಖ್ಯ. ಅವರಿಗೆ ಭಾರತ ರತ್ನ ಗೌರವ ಸಿಗಬೇಕು. ಇದು ಸಿದ್ದರಾಮಯ್ಯನನಂತಹಾ ಕ್ಷುಲ್ಲಕ ರಾಜಕಾರಣಿಗೆ ಅರ್ಥ ಆಗಲ್ಲ. ಸಿದ್ದರಾಮಯ್ಯ ನಂತಹಾ ಚೀಪ್ ರಾಜಕಾರಣಿಗೆ ಅರ್ಥ ಆಗಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಸಿದ್ದರಾಮಯ್ಯ ತಿಳಿದುಕೊಳ್ಳಲಿ. ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಸಾವರ್ಕರ್‌ಗೆ ಬೇಡ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

Related posts

Leave a Reply

Your email address will not be published. Required fields are marked *