Header Ads
Header Ads
Breaking News

ಡಿಕೆಶಿ ಮನೆಗೆ ಐಟಿ ದಾಳಿ ಅತ್ಯಂತ ಖೇದಕರ ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಖಂಡನೆ

 
ಕಾರ್ಕಳ : ಇತೀಚೆಗೆ ಅನಿರೀಕ್ಷಿತವಾಗಿ ಐಟಿ ಆದಾಯ ತೆರಿಗೆ ಅಧಿಕಾರಿಗಳು ಕರ್ನಾಟಕ ಸರಕಾರದ ಒಬ್ಬ ಪ್ರಭಾವಿ ಸಚಿವರಾದ ಕಾಂಗ್ರೆಸ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಇವರ ಮನೆಗೆ ಆದಾಯ ತೆರಿಗೆ ಇಲಾಖೆಯವರು ದಾಳಿ ಅತ್ಯಂತ ಕೇದಕರ ಎಂದು ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಹೇಳಿದರು.

ಆದಾಯ ತೆರಿಗೆ ಇಲಾಖೆಯವರು ಸಾಮಾನ್ಯವಾಗಿ ಪರಿಶೀಲನೆ ನಡೆಸುವುದು ದಾಳಿ ನಡೆಸುವುದು ಸ್ವಾಭಾವಿಕ. ಆದರೆ ಕರ್ನಾಟಕದಲ್ಲಿ ಕೇವಲ ಕಾಂಗ್ರೆಸ್ ನವರ ಮನೆಗಳನ್ನು ಹುಡುಕಿ ದಾಳಿ ನಡೆಸುವುದು, ಭಾರತೀಯ ಜನತಾ ಪಕ್ಷದ ಅನೇಕ ನಾಯಕರು ಇದರ ಬಹಳಷ್ಟು ಪಟ್ಟು ಸಂಪತ್ತುಗಳನ್ನು ಅನಧೀಕೃತವಾಗಿ ಕ್ರೋಡೀಕರಿಸಿದವರತ್ತ ಮುಖವನ್ನೇ ತೋರಿಸದೇ ಅಲ್ಲಿ ದಾಳಿ ಮಾಡುವುದನ್ನು ಬಿಟ್ಟು ಇಲ್ಲಿ ಮಾತ್ರ ದಾಳಿ ನಡೆಸಿರುವುದು ಬಿಜೆಪಿಯ ಪಕ್ಷಪಾತ ಮತ್ತು ಬ್ಲಾಕ್ ಮೇಲ್ ರಾಜಕಾರಣ. ಭಾರತ ಸರಕಾರ ಈ ದಾಳಿಯ ಹಿಂದೆ ತನತನ ತನ್ನದೇ ಆದ ಒಂದು ಅಜೆಂಡಾವನ್ನು ಇಟ್ಟು ಕೊಂಡಿದೆ. ಎಂದು ಹೇಳಿದರು.
ಅಲ್ಲಿ ರಾಜ್ಯ ಸಭಾ ಚುನಾವಣೆಗೆ ಸಜ್ಜಾಗುವ ಸಂದರ್ಭದಲ್ಲಿ ಗುಜರಾತಿನ ಶಾಸಕರು ಅಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ನಮಗೆ ಇಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ ಎಂದು ಸ್ವಯಂ ಇಚ್ಫೆಯಿಂದ ಕರ್ನಾಟಕಕ್ಕೆ ಬಂದು ಇಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ಮಾಡಿದಾಗ ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಸಹಾಯ ಮಾಡಿದಾಗ ಅವರಿಗೆ ಬೆದರಿಸಲು ಕೇಂದ್ರ ಬಿಜೆಪಿ ಸರಕಾರ ಈ ರೀತಿಯ ತಂತ್ರ
ಅನುಸರಿಸದಾಗ ಆಗಿದೆ ಎನ್ನುವಂತಹದ್ದು, ಇದೊಂದು ಸಾರ್ವಜನಿPವಾಗಿ ಇದೊಂದು ಎಲ್ಲರ ಗಮನಕ್ಕೆ ಬಂದಂತಹ ವಿಚಾರವಾಗಿದೆ. ಇದೊಂದು ಕಾಂಗ್ರೆಸ್ ಮೇಲೆ ಪಕ್ಷಪಾತದ ಧೋರಣೆಯಾಗಿದೆ ಎಂದು ಹೇಳಿದರು.
ವರದಿ: ಕೆ.ಎಂ. ಖಲೀಲ್

Related posts

Leave a Reply