Header Ads
Header Ads
Breaking News

ಡಿಕೆಶಿ ಸಾಮ್ರಾಜ್ಯದ ಮೇಲೆ ಐಟಿ ದಾಳಿ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

ಇಂಧನ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ .ಕೆ ಶಿವಕುಮಾರ್ ಮನೆಯ ಮೇಲೆ ಅದಾಯ ತೆರಿಗೆ ಇಲಾಖೆಯ ದಾಲಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಉಡುಪಿ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯಲ್ಲಿ ದ್ವೇಶ ರಾಜಕಾರಣಕ್ಕಾಗಿ ಕಾಂಗೆಸ್ ಮುಖಂಡರ ಮನೆಯ ಮೇಲೆ ಐಟಿ ಇಲಾಖೆಯನ್ನು ದುರುಪಯೋಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾಕಾರನ್ನು ಉದ್ದೇಶಿಸಿ ಕಾಂಗೆಸ್ ಮುಖಂಡ ಅಮ್ರತ್ ಶೆಣೈ ಮತನಾಡಿ ಬಿಜೆಪಿ ಸರಕಾರ ದ್ವೇಶದ ರಾಜಕಾರಣ ಮಾಡುತ್ತಿದೆ. ಡಿ ಕೆ ಶಿವಕುಮಾರ್ ಕೋಟ್ಯಾಂತರ ರೂಪಾಯಿ ಆದಯ ತೆರಿಗೆಯನ್ನು ಪಾವತಿಸುತ್ತಿರುವ ಉದ್ಯಮಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಐಟಿ ದಾಳುಯನ್ನು ಮಾಡಲಾಗಿದೆ. ಯಾವುದೇ ಉದ್ಯಮ ವಿಲ್ಲದೆ ೫೦೦ ಕೋಟಿ ರೂ, ಅದಾಯವನ್ನು ಹೆಚ್ಚಿಸಿಕೊಂಡಿರುವ ಉದ್ಯಮಿ ಅಮಿತ್ ಶಾ ಮನೆಗೆ ದಾಳಿಯಾಗಬೇಕಿತ್ತು. ಅದು ಬಿಟ್ಟು ಡಿಕೆಶಿಯವರ ಮನೆ ಮೇಲೆ ದಾಳಿ ನಡೆದಿರುವುದು ಖಂಡನೀಯ ಎಂದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply