Header Ads
Header Ads
Breaking News

ಡಿಕೆ ಬೋಸ್ ಕನ್ನಡ ಚಲನಚಿತ್ರ. ಸದ್ಯದಲ್ಲೇ ಚಿತ್ರ ತೆರೆಗೆ. ಕರಾವಳಿಯ ಕಲಾವಿದರೇ ನಟಿಸಿರುವ ಚಿತ್ರ. ಮಂಗಳೂರಿನಲ್ಲಿ ನಟ ಭೋಜರಾಜ ವಾಮಂಜೂರು ಮಾಹಿತಿ.

ಡಿಕೆ ಬೋಸ್ ಕನ್ನಡ ಚಿತ್ರದ ಚಿತ್ರೀಕರಣವಾಗಿದ್ದು ಚಿತ್ರದ ತಾಂತ್ರಿಕ ಕೆಲಸ ಬಹತೇಕ ಮುಗಿದಿದ್ದು, ಇನ್ನೇನೂ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ಎಂದು ಚಲನಚಿತ್ರ ನಟ ಭೋಜರಾಜ ವಾಮಂಜೂರು ತಿಳಿಸಿದರು.ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಡಿಕೆ ಬೋಸ್ ಕನ್ನಡ ಚಲನಚಿತ್ರದಲ್ಲಿ ಬಹುತೇಕ ಕಲಾವಿದರೂ ತಂತ್ರಜ್ಞರು ತುಳುನಾಡಿನವರೇ ಆಗಿದ್ದು, ಚಿತ್ರದ ಚಿತ್ರೀಕರಣ ಕೂಡ ಬಹುತೇಕ ಭಾಗ ಕರಾವಳಿಯ ಸುತ್ತಮುತ್ತಲೇ ಚಿತ್ರೀಕರಿಸಲಾಗಿದೆ. ಇನ್ನೂ ಡಾಲ್ವಿನ್ ಕೊಳಲಗಿರಿ ಸಂಗೀತವಿರುವ ಚಿತ್ರಕ್ಕೆ ಗುರುಕಿರಣ್, ಸಂಜೀತ್ ಹೆಗ್ಡೆ ಹಾಡಿರುವುದು ತುಂಬಾ ಖುಷಿಯಿದೆ. ಉದಯ ಬಳ್ಳಾಲ್‌ರ ಛಾಯಾಗ್ರಹಣ, ಅರ್ಜುನ್ ಲೂಯಿಸ್ ಹಾಗೂ ಕೀರ್ತನ್ ಭಂಡಾರಿ ಸಾಹಿತ್ಯದ ಜೊತೆಗೆ ಸಂದೀಪ್ ಮಹಾಂತೇಶ್ ಅವರು ಚಿತ್ರ ನಿರ್ದೇಶನ ಮಾಡಿದ್ದಾರೆ.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಚಲನಚಿತ್ರ ಪೃಥ್ವಿ ಅಂಬರ್, ಶೋಭರಾಜ್ ಪಾವೂರ್, ತಿಮ್ಮಪ್ಪ ಕುಲಾಳ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply