Header Ads
Breaking News

ಡಿಜೆ ಹಳ್ಳಿ ಗಲಭೆ ಕಾಂಗ್ರೆಸ್ ನಾಯಕರ ಪ್ರತಿಷ್ಠೆಯ ಗಲಭೆ : ನಳಿನ್ ಕುಮಾರ್ ಹೇಳಿಕೆ

ಬೆಂಗಳೂರಿನ ಡಿಜೆ ಹಳ್ಳಿ ಗಲಭೆ ಪ್ರಕರಣವು ಕಾಂಗ್ರೆಸ್‍ನ ಇಬ್ಬರು ನಾಯಕರ ಪ್ರತಿಷ್ಠೆಯ ಗಲಭೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜೆ ಹಳ್ಳಿ ಗಲಭೆ ಕಾಂಗ್ರೆಸ್ ನಾಯಕರ ಪ್ರತಿಷ್ಠೆಯ ಗಲಭೆ. ಅಖಂಡ ಶ್ರೀನಿವಾಸ ಮೂರ್ತಿ ಸಿದ್ಧರಾಮಯ್ಯರ ಬೆಂಬಲಿಗ. ಸಂಪತ್ ರಾಜ್ ಡಿಕೆ ಶಿವಕುಮಾರ್ ಅವರ ಬೆಂಬಲಿಗ. ಇಬ್ಬರು ಬೆಂಬಲಿಗರ ನಡುವಲ್ಲಿ ಗಲಭೆಯಾಗಿದೆ. ಪ್ರಕರಣದ ಆರೋಪಿ ಸಂಪತ್ ರಾಜ್‍ಗೆ ಕಾಂಗ್ರೆಸ್ ರಕ್ಷಣೆ ನೀಡಿದೆ. ಸಂಪತ್ ರಾಜ್‍ಗೆ ಕಾಂಗ್ರೆಸ್‍ನಿಂದ ರಕ್ಷಣೆ ನೀಡಲಾಗ್ತಿದೆ. ಎಸ್‍ಡಿಪಿಐ ಜೊತೆ ಕಾಂಗ್ರೆಸ್ ರಾತ್ರಿಯ ಕಳ್ಳಾಟ ಮಾಡ್ತಿದೆ. ಎಸ್‍ಡಿಪಿಐ ಜೊತೆ ಕಳ್ಳ ಒಡಂಬಡಿಕೆಯಾಗಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಅಕ್ರಮ ಹೊಂದಾಣಿಕೆ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *