Header Ads
Header Ads
Breaking News

ಡಿವೈಎಫ್‌ಐ ಕಚೇರಿ ಹಾಗೂ ಕ್ಲಬ್‌ಗೆ ಕಿಡಿಗಡಿಗಳಿಂದ ಬೆಂಕಿಯುಟ್ಟು ಹಾನಿ ಮಂಜೇಶ್ವರದ ಅರಿಕ್ಕಾಡಿ ಕುನ್ನಿಲ್‌ನಲ್ಲಿ ಘಟನೆ

ಮಂಜೇಶ್ವರದ ಆರಿಕ್ಕಾಡಿ ಕುನ್ನಿಲ್‌ನಲ್ಲಿ ಡಿವೈಎಫ್‌ಐ ಕಚೇರಿ ಹಾಗೂ ಕ್ಲಬ್‌ವೊಂದಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟು ನಾಶಗೊಳಿಸಿದ್ದಾರೆ.ಡಿವೈಎಫ್‌ಐ, ಎಸ್‌ಎಫ್‌ಐ, ಕಾಕಗೇಟ್ ಘಟಕ ಕಚೇರಿ ಹಾಗೂ ಕೆಜಿಎನ್ ಟೀಂ ಚ್ಯಾರಿಟಿ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್‌ಗೆ ಕಿಚ್ಚಿಡಲಾಗಿದೆ. ಸಮೀಪದ ರಸ್ತೆಯಲ್ಲಿ ತೆರಳುತ್ತಿದ್ದವರು ಕಟ್ಟಡ ಬೆಂಕಿ ಉರಿಯುತ್ತಿರುವುದನ್ನು ಕಂಡು ಇತರರಿಗೆ ತಿಳಿಸಿದ್ದಾರೆ.

ಕೂಡಲೇ ನಾಗರಿಕರು ಹಾಗೂ ನೈಟ್ ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ತಲುಪಿ ಬೆಂಕಿ ನಂದಿಸಿದರು.ಡಿವೈಎಫ್‌ಐ ಕಚೇರಿ ಹಾಗೂ ಕ್ಲಬ್ ಒಂದೇ ಕಟ್ಟಡದ ಅಕ್ಕಪಕ್ಕದ ಕೊಠಡಿಗಳಲ್ಲಿ ಕಾರ್ಯಾಚರಿಸುತ್ತಿದೆ. ಇದರ ಬಾಗಿಲಿನ ಮೂಲಕ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟಿರುವುದಾಗಿ ಅಂದಾಜಿಸಲಾಗಿದೆ. ಕಚೇರಿಗಳ ಹೊರಗೆ ಬಿದಿರಿನಿಂದ ನಿರ್ಮಿಸಿದ ಆಸನ ಹಾಗೂ ಕಚೇರಿ ಯಲ್ಲಿದ್ದ ಬೋರ್ಡ್ ಮೊದಲಾ ದವು ಉರಿದು ನಾಶಗೊಂಡಿವೆ. ಸಮೀಪದಲ್ಲಿ ಉರಿಯುತ್ತಿದ್ದ ಬೀದಿ ದೀಪವನ್ನು ನಂದಿಸಿದ ಬಳಿಕ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ.ಘಟನೆ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.