Header Ads
Header Ads
Breaking News

ಡಿವೈಎಫ್‌ಐ, ಕ್ಲಬ್ ಕಚೇರಿಗೆ ಕಿಚ್ಚಿರಿಸಿದ ಪ್ರಕರಣ ಇಬ್ಬರ ಬಂಧನ ಮೂವರಿಗಾಗಿ ಶೋಧ ಮಂಜೇಶ್ವರ ಪೊಲೀಸರ ಕಾರ್ಯಾಚರಣೆ

ಮಂಜೇಶ್ವರ: ಆರಿಕ್ಕಾಡಿ ಕುನ್ನಿಲ್‌ನಲ್ಲಿ ಡಿವೈಎಫ್‌ಐ ಘಟಕದ ಕಚೇರಿ ಹಾಗೂ ಕೆಜಿಎನ್ ಟೀಂ ಚ್ಯಾರಿಟಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದು, ಮೂವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಆರಿಕ್ಕಾಡಿ ಬನ್ನಂಗುಳ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಆರಿಕ್ಕಾಡಿ ಕುನ್ನಿಲ್‌ನ ಜಬ್ಬಾರ್‌ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳಿದ್ದು ಅವರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಶೋಧ ನಡೆಯುತ್ತಿದೆ. ಮಾರ್ಚ್6 ರಂದು ಮುಂಜಾನೆ 2.45ಕ್ಕೆ ಡಿವೈಎಫ್‌ಐ ಹಾಗೂ ಕ್ಲಬ್ ಕಚೇರಿಗೆ ಬೆಂಕಿಯಿಟ್ಟು, ನಾಶಗೊಳಿಸಲಾಗಿತ್ತು. ಸೀಮೆ ಎಣ್ಣೆ ಸುರಿದು ಕಿಚ್ಚಿರಿಸಿದ್ದರಿಂದ ಸಾಮಾಗ್ರಿಗಳು ನಾಶವಾಗಿತ್ತು. ಗಲಭೆ ಸೃಷ್ಟಿಸಲು ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply