Header Ads
Header Ads
Breaking News

ಡಿವೈಎಫ್‌ಐ ಸದಸ್ಯತ್ವ ಅಭಿಯಾನ ಕುತ್ತಾರು ಜಂಕ್ಷನ್‌ನಲ್ಲಿ ಸಾರ್ವಜನಿಕ ಸಭೆ

ಉಳ್ಳಾಲ: ಯುವಸಮುದಾಯ ಧರ್ಮ ದ್ವೇಷ ಮಾಡಿಕೊಂಡು ಬಾಳುವ ವ್ಯವಸ್ಥೆಯನ್ನು ಕೆಲ ಶಕ್ತಿಗಳು ನಿರ್ಮಿಸುತ್ತಿದೆ. ಆದರೆ ದೇಶದಲ್ಲಿ ಬಹುದೊಡ್ಡ ಸಮಸ್ಯೆಯಾಗಿರುವ ಬಡತನ-ಶ್ರೀಮಂತ ತಾರತಮ್ಯದ ವಿರುದ್ಧ ಹೋರಾಟ ನಡೆಸುವಂತಹ ವಾತಾವರಣ ನಿರ್ಮಾಣವಾಗಬೇಕಿದ್ದು, ಈ ನಿಟ್ಟಿನಲ್ಲಿ ಡಿವೈಎಫ್ ಐ ಕಾರ್‍ಯಾಚರಿಸುತ್ತಿದೆ ಎಂದು ಡಿ ವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಅವರು ಡಿವೈಎಫ್ ಐ ಮುನ್ನೂರು ಗ್ರಾಮ ಸಮಿತಿ ವತಿಯಿಂದ ಕುತ್ತಾರು ಜಂಕ್ಷನ್ನಿನಲ್ಲಿ ನಡೆದ ಸದಸ್ಯತ್ವ ಅಭಿಯಾನ ಹಾಗೂ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಧರ್ಮದಲ್ಲಿ ಶ್ರೀಮಂತರಿದ್ದಾರೆ. ಅದೇ ರೀತಿ ಊಟಕ್ಕೆ ಪರದಾಡುವಂತಹ ಬಡವರೂ ಕೂಡಾ ಇದ್ದಾರೆ. ಐಷಾರಾಮಿ ಜೀವನ ನಡೆಸುವ ಯುವಕರು ಒಂದೆಡೆಯಿದ್ದರೆ, ಇನ್ನೊಂದೆಡೆ ಕೆಲಸವಿಲ್ಲದೆ ರಸ್ತೆಬದಿಯಲ್ಲಿ ಜೀವನ ಕಳೆಯುವ ಯುವಕರು ದೇಶದಲ್ಲಿದ್ದಾರೆ. ಆದರೆ ಯುವಕರನ್ನು ಧರ್ಮ ದ್ವೇಷ ಮಾಡಿಕೊಂಡು ಬಾಳುವಂತಹ ಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ವಾಸ್ತವವಾಗಿ ಬಡವ-ಶ್ರೀಮಂತ ತಾರತಮ್ಯವನ್ನು ದೂರವಾಗಿಸಿ ಸಮಾನತೆಯ ಜೀವನ ನಡೆಸುವ ಸಲುವಾಗಿ ಯುವಕರು ತಮ್ಮನ್ನು ತೊಡಗಿಸಿಕೊಳ್ಳುವ ಅನಿವಾರ್‍ಯತೆ ಇದೆ. ದೇರಳಕಟ್ಟೆ ಯಿಂದ ಕೊಣಾಜೆವರೆಗೂ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತಿನಿಂತರೂ. ಕೋಟ್ಯಾಧೀಶ, ಶ್ರೀಮಂತರ , ರಾಜಕಾರಣಿಗಳ ಮಕ್ಕಳು ಮಾತ್ರ ಅಲ್ಲಿ ವ್ಯಾಸಾಂಗ ಮಾಡುತ್ತಾರೆ. ಊರಿನ ಮಹಿಳೆಯರು ನೆಲ ಒರೆಸುವ, ಗುಡಿಸುವ ಕೆಲಸ ಮಾಡಿದರೆ, ಯುವಕರು ಪ್ಲಂಬಿಂಗ್, ಇಲೆಕ್ಟ್ರೀಷಿಯನ್, ಕ್ಲರ್ಕ್ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಭಾವಂತರಿದ್ದರೂ ಸಮಾನ ಶಿಕ್ಷಣ ವ್ಯವಸ್ಥೆಯ ಕೊರತೆಯಿಂದ ಇಂತಹ ದುರಾವಸ್ಥೆ ನಿರ್ಮಾಣವಾಗಿದೆ. 10 ವರ್ಷಗಳಿಂದ ರಾಜ್ಯ ಸರಕಾರ ಅಧೀನದಡಿ ಬರುವ ಇಲಾಖೆಗಳಲ್ಲಿ ನಿವೃತ್ತಿ ಹೊಂದಿದವರ 2.5 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. ಅದನ್ನು ಭರ್ತಿ ಮಾಡಿದಲ್ಲಿ ರಾಜ್ಯದ 25 ಲಕ್ಷ ಮಂದಿಯ ಬಡತನ ದೂರವಾಗಬಹುದು. ಅದೇ ರೀತಿ ಕೇಂದ್ರ ಸರಕಾರ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಯುವಕರನ್ನು ದುಡಿಸಿ ಜೀತ ಪದ್ಧತಿಯಲ್ಲಿ ನಡೆಸುವ ಕೆಲಸ ಮಾಡುತ್ತಿದೆ. ಎಂಆರ್ ಪಿಎಲ್ ಬರಬೇಕಾದರೆ 10,00 ಉದ್ಯೋಗ ಸೃಷ್ಟಿ ಆಗುವುದು ಎಂಬ ಭರವಸೆ ಜಿಲ್ಲೆಯ ಕೇವಲ 700-800 ಉದ್ಯೋಗ ಕೊಟ್ಟಿದೆ. ಎಸ್ ಇಝೆಡ್ ನಲ್ಲೂ ಭೂಮಿ ಕೊಟ್ಟವರಿಗೆ ಮಾತ್ರ ಉದ್ಯೋಗ ಕೊಟ್ಟಿದೆ ಎಂದು ಆರೋಪಿಸಿದರು. ಸರ್ವರಿಗೂ ಉದ್ಯೋಗ, ಶಿಕ್ಷಣ, ಸಮಾನತೆ ದೊರೆಯುವ ಉದ್ದೇಶದಿಂದ ವಿವಿಧ ಸಮಾನಮನಸ್ಕ ಸಂಘಟನೆಗಳನ್ನು ಒಗ್ಗೂಡಿಸಿ 1980 ರಲ್ಲಿ ಪಂಜಾಬ್ ನಲ್ಲಿ ಡಿವೈಎಫ್‌ಐ ಆರಂಭ ಕಂಡಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್ ಜನ್ಮಭೂಮಿಯಲ್ಲಿ ಪ್ರಥಮ ಸಮ್ಮೇಳನ ನಡೆಸುವ ಮೂಲಕ ಆರಂಭ ಕಂಡ ಸಂಘಟನೆ ಸಮಾಜವಾದಿ ಆಶಯಗಳು ಜಾರಿಗೆ ಬರುವ ಉದ್ದೇಶದೊಂದಿಗೆ ಯುವಕರನ್ನು ಸಂಘಟಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಡಿವೈಎಫ್ ಐ ಉಳ್ಳಾಲ ವಲಯ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಪಿಲಾರ್, ಮಾಜಿ ಅಧ್ಯಕ್ಷ ಮಹಾಬಲ ಟಿ.ದೆಪ್ಪೆಲಿಮಾರ್, ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಸುನಿಲ್ ತೇವುಲ, ನಿತಿನ್ ಕುತ್ತಾರ್, ಶ್ರಾವಣ್ ತೇವುಲ, ಸುರೇಶ್ ಕುತ್ತಾರ್, ಭರತ್ ರಾಜ್, ಕಾರ್ಮಿಕ ಮುಖಂಡ ಜಯಂತ್ ನಾಯ್ಕ್ ಉಪಸ್ಥಿತರಿದ್ದರು.

ವರದಿ: ಆರೀಫ್ ಉಳ್ಳಾಲ

Related posts

Leave a Reply