Header Ads
Breaking News

ಡಿವೈಎಫ್‍ ಐ ಘಟಕ ಉರ್ವಸ್ಟೋರ್ ಘಟಕದಿಂದ ರಕ್ತದಾನ ಶಿಬಿರ

ದಿವಂಗತ ಕಾಮ್ರೆಡ್ ಹರಿಶ್ವಂದ್ರ ರಾವ್ ಅವರ ಸ್ಮರಣಾರ್ಥ ಡಿವೈಎಫ್‍ಐ ಉರ್ವಸ್ಟೋರ್ ಘಟಕ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿಹಿಲ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎಜೆ ಆಸ್ಪತ್ರೆಯ ಬ್ಲೆಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಅಶೋಕನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.


ರಕ್ತದಾನ ಶಿಬಿರವನ್ನು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್‍ನ ರತ್ನಾಕರ್ ಪಿ ಹಾಗೂ ಜಗದೀಶ್ ಪೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಕ್ತದಾನ ಶಿಬಿರಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಹೇಳಿದರು.
ಆನಂತರ ಎಜೆ ಆಸ್ಪತ್ರೆಯ ಬ್ಲೆಡ್ ಬ್ಯಾಂಕ್‍ನ ಮೇನೇಜರ್ ಗೋಪಾಲಕೃಷ್ಣ ಅವರು ಮಾತನಾಡಿ, ಇವತ್ತಿನ ದಿನದಲ್ಲಿ ರಕ್ತದ ಅವಶ್ಯಕತೆ ಸಾಕಷ್ಟಿದೆ. ರಕ್ತದಾನ ಮಾಡಿ ಜೀವ ಉಳಿಸಿ ಎಂದು ಹೇಳಿದರು.


ಇದೇ ವೇಳೆ ಮಾತನಾಡಿದ ಡಿವೈಎಫ್‍ಐ ಜಿಲ್ಲಾ ಮುಖಂಡರಾದ ದಯಾನಂದ ಶೆಟ್ಟಿ ಅವರು, ರಕ್ತವನ್ನು ಕೃತಕವಾಗಿ ಪಡೆಯಲು ಸಾಧ್ಯವಿಲ್ಲ. ಅದನ್ನು ಒಬ್ಬ ಮನುಷ್ಯನ ದೇಹದಿಂದಲೇ ರಕ್ತವನ್ನು ಪಡೆಯಬೇಕು. ರಕ್ತದಾನ ಶಿಬಿರವನ್ನು ಡಿವೈಎಫ್‍ಐ ಘಟಕದವರು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ ಎಂದರು.
ಈ ಸಂದರ್ಭ ಡಿವೈಎಫ್‍ಐ ಉರ್ವಸ್ಟೋರ್ ಘಟಕದ ಅಧ್ಯಕ್ಷರಾದ ಪ್ರಶಾಂತ್ ಎಂ.ಬಿ.ಡಿವೈಎಫ್‍ಐ ಮುಖಂಡರಾದ ರಾಜೇಶ್ ಕುಲಾಲ್ ಉರ್ವಸ್ಟೋರ್, ಪ್ರಶಾಂತ್ ಆಚಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *