Header Ads
Header Ads
Breaking News

ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್‌ಗೆ ಒಲಿದ ಅದೃಷ್ಟ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಬಿಲ್ಲವ ಸಮುದಾಯದ ಕೆ. ಹರೀಶ್ ಕುಮಾರ್ ಅವರು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
ಈ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ನ ೧೧ ಸದಸ್ಯರ ಅವಧಿ ಕೊನೆಯಾಗುತ್ತಿದ್ದು, ಜೂನ್ ೧೧ಕ್ಕೆ ಚುನಾವಣೆ ನಡೆಯಲಿದೆ. ಈ ಪೈಕಿ ಕಾಂಗ್ರೆಸ್ ೪ ಸ್ಥಾನಗಳನ್ನು ವಿಧಾನ ಪರಿಷತ್‌ಗೆ ಗೆಲ್ಲುವ ಅವಕಾಶವಿದೆ.

ನಾಲ್ಕು ಸ್ಥಾನದಲ್ಲಿ ಒಂದು ಸ್ಥಾನವನ್ನು ನನಗೆ ಒದಗಿಸಿದ್ದಾರೆ. ಅವಕಾಶ ಒದಗಿಸಿಕೊಟ್ಟ ಸೋನಿಯಾಗಾಂಧಿ, ಅಧ್ಯಕ್ಷರಾದ ರಾಹುಲ್ ಗಾಂಧಿ ಅವರಿಗೆ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.

 

Related posts

Leave a Reply