Header Ads
Header Ads
Breaking News

ಡಿಸಿ ಕಚೇರಿಯಲ್ಲಿ ದಲಿತ ಕುಂದುಕೊರತೆ ಸಭೆ ಸಭೆಯ ಅರ್ಧದಿಂದ ಎದ್ದು ಹೋದ ಡಿಸಿ ಜಗದೀಶ್ ಜಿಲ್ಲಾಧಿಕಾರಿಗಳ ವರ್ತನೆಗೆ ದಲಿತ ಸಂಘಟನೆಗಳು ಖಂಡನೆ

 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಡಿಸಿ ಮನ್ನಾ ಜಮೀನಿನ ಬಗ್ಗೆ ಅರ್ಜಿದಾರರ ಪರವಾಗಿ ದಲಿತ ಮುಖಂಡರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಜಿಲ್ಲಾಧಿಕಾರಿಗಳು ಸಭೆಯಿಂದ ಅರ್ಧದಿಂದ ತೆರಳಿದ ಘಟನೆ ಖಂಡನೀಯವಾಗಿದ್ದು, ಇದರ ವಿರುದ್ಧ ಹಾಗೂ ಜಿಲ್ಲಾಧಿಕಾರಿಯನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡುವ ವರೆಗೂ ದಲಿತ್ ಸಂಘಟನೆಗಳು ಹೋರಾಟ ನಡೆಸಲಿದೆ ಎಂದು ವಿಟ್ಲದ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು.

ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಈ ರೀತಿಯ ವರ್ತನೆಯನ್ನು ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಖಂಡಿಸುತ್ತದೆ. ಈ ಮೊದಲು ಬಂಟ್ವಾಳದಲ್ಲಿ ತಹಶೀಲ್ದಾರರಾದ ರವಿಚಂದ್ರ ನಾಯಕ್ ಅವರು ಕೂಡಾ ಇದೇ ರೀತಿಯಾಗಿ ವರ್ತಿಸಿದ್ದು, ಬಳಿಕ ಕ್ಷಮೆಯಾಚಿಸಿದ್ದರು. ಆದರೆ ಜಿಲ್ಲಾಧಿಕಾರಿ ಡಾ ಜಗದೀಶ್ ಅವರ ವರ್ತನೆ ಮಾತ್ರ ಮಿತಿಮೀರಿದ್ದು, ಇವರನ್ನು ಜಿಲ್ಲೆಯಿಂದ ಹೊರಕಳುಹಿಸುವ ತನಕ ಮತ್ತು ಡಿಸಿ ಮನ್ನಾ ಜಮೀನನ್ನು ದಲಿತ ವರ್ಗದವರಿಗೆ ಒದಗಿಸುವ ತನಕ ಜಿಲ್ಲೆಯಲ್ಲಿರುವ ನಾನಾ ದಲಿತ್ ಸಂಘಟನೆಗಳು ತೀವ್ರ ರೀತಿಯಲ್ಲಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕಡಂಬು, ಜಿಲ್ಲಾ ದಲಿತ್ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಯು, ಸಂಚಾಲಕ ಗೋಪಾಲ ನೇರಳಕಟ್ಟೆ, ರಾಮಣ್ಣ ಪಿಲಿಂಜ ಇದ್ದರು.

Related posts

Leave a Reply