Header Ads
Header Ads
Breaking News

ಡಿಸೆಂಬರ್ 12ರಿಂದ ದತ್ತಮಾಲಾ ಅಭಿಯಾನ

ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಡಿಸೆಂಬರ್ ೧೨ರಿಂದ ದತ್ತಮಾಲಾ ಅಭಿಯಾನ ನಡೆಯಲಿದೆ. ಈ ಅಭಿಯಾನಕ್ಕೆ ಮಂಗಳೂರು ವಿಭಾಗದಿಂದ 15,00 ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಜರಂಗದಳದ ಪ್ರಾಂತ್ ಸಂಯೋಜಕ್ ಸುನೀಲ್ ಕೆ.ಆರ್. ಹೇಳಿದರು.

ಅವರು ಮಂಗಳೂರಿನಲ್ಲಿ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹಿಂದೂಗಳ ಶ್ರದ್ಧಾ ಕೇಂದ್ರವಾದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತ ಜಯಂತಿಯ ಅಂಗವಾಗಿ ದತ್ತಮಾಲಾ ಅಭಿಯಾನವು ಡಿಸೆಂಬರ್ 12ರಿಂದ 21ರ ವರೆಗೆ ನಡೆಯಲಿದ್ದು, ಡಿಸೆಂಬರ್ 22ರಂದು ದತ್ತಪೀಠಕ್ಕೆ ತೆರಳಿ ದತ್ತಪೀಠ ದತ್ತಪಾದುಕೆ ದರುಶನದ ಮೂಲಕ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಆನಂತರ ಬಜರಂಗದಳದ ಪ್ರಾಂತ ಸಂಯೋಜಕ್ ಮುರಳಿ ಹಸಂತಡ್ಕ ಮಾತನಾಡಿ, ದತ್ತಮಾಲಾ ಅಭಿಯಾನಕ್ಕೆ ಮಂಗಳೂರು ವಿಭಾಗದಿಂದ 15,000 ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ. ಅಭಿಯಾನದಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳಿಂದ ಆಗಮಿಸಲಿದ್ದಾರೆ. ಡಿಸೆಂಬರ್ 12ರಂದು ದತ್ತಮಾಲಾ ಅಭಿಯಾನವು ಡಿಸೆಂಬರ್ 12ಕ್ಕೆ ನೂರಾರು ಕಾರ್ಯಕರ್ತರು ಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಭುಜಂಗ ಕುಲಾಲ್, ಪ್ರವೀಣ್ ಕುತ್ತಾರ್, ಪುನೀತ್ ಅತ್ತಾವರ, ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು.

Related posts

Leave a Reply