Header Ads
Header Ads
Breaking News

ಡಿಸೆಂಬರ್ 22ರಿಂದ ಜನವರಿ 6ರ ತನಕ ಸುಲ್ತಾನ್ ಡೈಮಂಡ್ಸ್ ಮಳಿಗೆಯಲ್ಲಿ ವಿಶ್ವ ವಜ್ರ ಪ್ರದರ್ಶನಕ್ಕೆ ಚಾಲನೆ

ಮಂಗಳೂರಿನ ಕಂಕನಾಡಿ ಬೈಪಾಸ್ ರಸ್ತೆಯ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಮಳಿಗೆಯಲ್ಲಿ ಡಿಸೆಂಬರ್ 22ರಿಂದ ಜನವರಿ 6ರ ತನಕ ನಡೆಯಲಿರುವ ದಕ್ಷಿಣ ಭಾರತದ ಬೃಹತ್ ವಜ್ರಗಳ ಪ್ರದರ್ಶನ ವಿಶ್ವ ವಜ್ರಕ್ಕೆ ಚಾಲನೆ ದೊರಕಿತ್ತು.

ಮಂಗಳೂರಿನಲ್ಲಿ ಈಗಾಗಲೇ ಹೆಸ್ರು ಪಡೆದಿರುವ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಮಳಿಗೆಯಲ್ಲಿ ಡಿಸೆಂಬರ್ 22ರಿಂದ ಜನವರಿ 6ರ ತನಕ ನಡೆಯಲಿರುವ ದಕ್ಷಿಣ ಭಾರತದ ಬೃಹತ್ ವಜ್ರಗಳ ಪ್ರದರ್ಶನ ವಿಶ್ವ ವಜ್ರಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತ್ತು. ಇನ್ನು ಚಿತ್ರನಟಿ ಕಾವ್ಯಾ ಶೆಟ್ಟಿ ಅವರು ಪ್ರದರ್ಶನವನ್ನು ಉದ್ಘಾಟಿಸಿದ್ರು. ಈ ವೇಳೆ ಮಾತನಾಡಿದ ಅವರು, ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್‌ನಲ್ಲಿ ಅಪೂರ್ವ ವೈವಿಧ್ಯಮಯ ವಜ್ರಾಭರಣ ಸಂಗ್ರಹವಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲ ಮತ್ತು ಖರೀದಿಗೆ ಅವಕಾಶ ಕಲ್ಪಿಸಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಯೇನೆಪೋಯ ಸಮೂಹ ಸಂಸ್ಥೆಯ ಹಸೀನಾ ನೌಫಲ್ ಯೇನೆಪೋಯ ಸಾಲಿಟರ್ ಸಂಗ್ರಹ , ಮಂಜುನಾಥ್ ರಬ್ಬರ್‌ನ ಸಿಇಒ ಲಕ್ಷ್ಮೀರಾವ್ ಸಿಂಗಾಪುರ ಸಂಗ್ರಹ, ಲಯನ್ಸ್ ಕ್ಲಬ್ ಸಂಚಾಲಕಿ ಶರ್ಮಿಳಾ ಕಿಲ್ಲೆ ಇಟಾಲಿಯನ್ ಸಂಗ್ರಹ, ಡಾ|ಆರೂರು ಪ್ರಸನ್ನ ರಾವ್ ಬೆಲ್ವಿಯಂ ಸಂಗ್ರಹ, ಅಪೋಲೋ ಟಯರ್ಸ್‌ನ ನೂರ್ ಜಹಾನ್ ಫ್ರೆಂಚ್ ಸಂಗ್ರಹ, ಡಾ. ಕವಿತಾ ಐವನ್ ಅಮೆರಿಕ ಸಂಗ್ರಹ, ಕ್ರೂಸ್ ರೆಸ್ಟೋರೆಂಟ್ ಪಾಲುದಾರರಾದ ರೂಪಾ ಧರ್ಮಯ್ಯ ಮಧ್ಯಪ್ರಾಚ್ಯ ಸಂಗ್ರಹ , ವೆಸ್ಟರ್ನ್ ಇಂಡಿಯಾ ಫ್ಲೈವುಡ್ ನ ರಫಿಯಾ ಕೋಯ ಟರ್ಕಿಶ್ ಸಂಗ್ರಹ , ಶರ್ವತ್ ಸಾಜಿದ್ ಪೋಲ್ಕಿ ಸಂಗ್ರಹ ಹಾಗೂ ಉಳ್ಳಾಲದ ಫಾತಿಮಾ ಪರ್ವಿನ್ ಸಾಂಪ್ರದಾಯಿಕ ಸಂಗ್ರಹವನ್ನು ಅನಾವರಣಗೊಳಿಸಿದರು. ಡೈಮಂಡ್ ಗ್ರೇಡಿಂಗ್ ಯಂತ್ರವನ್ನು ಬಿ.ಎಚ್.ನವಾಝ್ ಉದ್ಘಾಟಿಸಿದ್ರು.

ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಆಡಳಿತ ನಿರ್ದೇಶಕ ಡಾ.ಟಿ.ಎಂ. ಅಬ್ದುಲ್ ರವೂಫ್, ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ.ಅಬ್ದುಲ್ ರಹೀಂ, ತಹ್ಸಿನ್ ಉಪಸ್ಥಿತಿರಿದ್ದರು. ಸುಲ್ತಾನ್ ಡೈಮಂಡ್ಸ್ ಆಂಡ್ಸ್ ಗೋಲ್ಡ್‌ನ ಉತ್ಕೃಷ್ಟ ವಜ್ರಗಳ ಈ ಪ್ರದರ್ಶನ ಗ್ರಾಹಕರಿಗೆ ವಿಶ್ವದ ಅತ್ತುತ್ತಮ ವಜ್ರಾಭರಣಗಳನ್ನು ನೋಡುವ ಅಪರೂಪದ ಅವಕಾಶ ಸಿಕ್ಕಿದೆ. ಐಜಿಐ ಪ್ರಮಾಣೀಕೃತ ವಿಶ್ವದೆಲ್ಲೆಡೆಯ ಸುಮಾರು 10,000 ಕ್ಯಾರೆಟ್‌ಗಳಿಗಿಂತಲೂ ಅಧಿಕ ವಜ್ರಾಭರಣಗಳ ಅಪಾರ ಸಂಗ್ರಹ ಪ್ರದರ್ಶನದಲ್ಲಿ ಇದೆ. ಮಳಿಗೆಯಲ್ಲಿ ಸತತ ಆರನೇ ವರ್ಷದ ಪ್ರದರ್ಶನ. ಡೈಮಂಡ್ ಕ್ಯಾರೆಟ್ ಒಂದಕ್ಕೆ 8000 ರೂಗಳ ವಿಶೇಷ ರಿಯಾಯಿತಿ ಕೂಡ ಪಡೆಯುವ ಅವಕಾಶವಿದೆ.

Related posts

Leave a Reply