Header Ads
Header Ads
Breaking News

ಡಿ ಎ ಪಿ ಸಿ ವತಿಯಿಂದ ಸತ್ಯಾಗ್ರಹ

ಮಂಜೇಶ್ವರ: ಜಿಲ್ಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಹಾಗೂ ಅವರ ಕುಟುಂಬಗಳಿಗೆ ದೊರಬೇಕಾದ ನ್ಯಾಯಯುತವಾದ ಬೇಡಿಕೆಗಳನ್ನು ನೂತನ ಸರಕಾರ ಗಮನಕ್ಕೆ ತೆಗೆದುಕೊಳ್ಳುವುದಿಲ್ಲವೆಂಬುದಾಗಿ ಆರೋಪಿಸಿ ಡಿ ಎ ಪಿ ಸಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದ ಸಹಿ ಮರದಡಿಯಲ್ಲಿ ಸೂಚನಾ ಸತ್ಯಾಗ್ರಹ ನಡೆಸಲಾಯಿತು.ಕೆ ಪಿ ಸಿ ಸಿ ಕಾರ್ಯದರ್ಶ್ ಕೆ ಕುಂಞಿ ಕಣ್ಣನ್ ಸತ್ಯಾಗ್ರಹವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಾಸರಗೋಡು ಎಂಡೋ ಸಲ್ಫಾನ್ ಬಾಧಿತ ವ್ಯಕ್ತಿಗಳಿಗೆ ಹಾಗೂ ಕುಟುಂಬಗಳಿಗೆ ಪಂ. ಮಟ್ಟದಲ್ಲಿ ವಿಭಜಿಸಿ ಅವರಿಗೆ ಸಿಗಬೇಕಾದ ಹಕ್ಕುಗಳನ್ನು ನಿಷೇಧಿಸುತ್ತಿರುವುದಾಗಿ ಅವರು ಆರೋಪಿಸಿದರು. ಕಳೆದ ಸಲ ಅಧಿಕಾರದಲ್ಲಿದ್ದ ಯುಡಿಎಫ್ ಸರಕಾರ ಎಮ್ಡೊ ಪೀಡಿತರ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂಧಿಸಿದೆ. ಎಂದು ಅವರು ಹೇಳಿದರು. ಡಿಫರೆಂಟಲಿ ಏಬಲ್ ಪೀಪಲ್ ಕಾಂಗ್ರೆಸ್ ( ಡಿ ಎ ಪಿ ಸಿ) ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಚಳವಳಿಗೆ ಚಾಲನೆ ನೀಡಲಾಗಿದೆ.ಎಂಡೋ ಸಲ್ಫಾನ್ ಶ್ಬಿರದ ಉದ್ದೇಶವನ್ನು ಬುಡಮೇಲುಗೊಳಿಸುವ ಹುನ್ನಾರವನ್ನು ಕೈ ಬಿಡಬೇಕು, ರೋಗಿಗಳಿಗೆ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಲ್ಲಿ ಚ್ಕಿತ್ಸಾ ಸೌಕರ್ಯಗಳನ್ನು ಒದಗಿಸಬೇಕು, ರೋಗಿಗಳಿಗೆ ಪ್ರತ್ಯೇಕ ವಾರ್ಡು ಸ್ಥಾಪಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸತ್ಯಾಗ್ರಹವನ್ನು ನಡೆಸಲಾಯಿತು. ಡ್ ಸಿ ಸಿ ಅಧ್ಯಕ್ಷ ಹಕೀಂ ಕುನ್ನಿಲ್, ಕಾರ್ಯದರ್ಶಿ ಕೇಶವ ಪ್ರಸಾದ್ ನಾಣಿಹಿತ್ಲು ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply