Header Ads
Header Ads
Breaking News

ಡಿ.14ರಿಂದ 16ರ ವರೆಗೆ ಸಾಹಿತ್ಯ ಸೌರಭ ಮತ್ತು ಪುಸ್ತಕ ಹಬ್ಬ

ಪುತ್ತೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಇವರ ಆಶ್ರಯದಲ್ಲಿ ಡಿ೧೪ರಿಂದ ೧೬ ವರೆಗೆ ಪುತ್ತೂರು ಟೌನ್‌ಹಾಲ್ ಬ್ಯಾಂಕ್ ಸಭಾಂಗಣದಲ್ಲಿ ’ಸಾಹಿತ್ಯ ಸೌರಭ-ಪುಸ್ತಕ ಹಬ್ಬ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಬಿ.ಐತ್ತಪ್ಪ ನಾಕ್ ತಿಳಿಸಿದರು.

ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಡಿ 14 ಸಂಜೆ 5.30ಕ್ಕೆ ಪುಸ್ತಕ ಪ್ರದರ್ಶನ ಉದ್ಘಾಟನೆ ಹಾಗೂ ವಿ.ಬಿ.ಅರ್ತಿಕಜೆ ಅವರ ಕೃತಿ ’ನ್ಯಾಯಮಂಜರಿ’ ಮತ್ತು ಶಂಕರಿ ಶರ್ಮ ಅವರ ’ಭಾವಬಿಂದು’ನೂತನ ಕೃತಿಗಳ ಲೋಕಾರ್ಪಣೆ ನಡೆಯಲಿದೆ.ಶಿಕ್ಷಕ ಕೇಶವ ಪೆರಾಜೆ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೃತಿಗಳನ್ನು ಹೊಸದಿಗಂತ ಪತ್ರಿಕೆಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಶಕುಮಾರ ಎಂ.ಕೆ. ವಹಿಸಲಿದ್ದಾರೆ. ಡಿ.15ರಂದು ಸಂಜೆ ೫ ಗಂಟೆಗೆ ಮಂಗಳೂರಿನ ಶ್ರೀನಿವಾಸ ರಾವ್-ಸಾವಿತ್ರಿ ದಂಪತಿಗೆ ’ಬೋಳಂತಕೋಡಿ ಕನ್ನಡ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಡಿ.16ರಂದು ಬೆಳಿಗ್ಗೆ 9.30ಕ್ಕೆ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ’ಮಕ್ಕಳ ಕಲರವ’ ಕಾರ್ಯಕ್ರಮ ನಡೆಯಲಿದೆ.

ಡಿ.16ರ 12ಗಂಟೆಯಿಂದ ನಾ.ಕಾರಂತ ಅವರ ಕೃತಿ ’ಅಗುಳು’, ರಾಧೇಶ್ ತೋಳ್ಪಾಡಿ ಅವರ ಕೃತಿ ’ರೈಲು ರೈಲು ಅಲಸಂಡೆ’ ಮತ್ತು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಮೈತ್ರಿ ಜೆ.ವೈ ಅವರ ಕೃತಿ ’ಚಿಗುರೆಲೆ’ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸಾಹಿತಿ ವಿ.ಬಿ.ಅರ್ತಿಕಜೆ, ನ್ಯಾಯವಾದಿ ಕೆ.ಆರ್.ಆಚಾರ್ಯ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಪ್ರಕಾಶ್ ಕುಮಾರ್ ಕೊಡೆಂಕಿರಿ ಹಾಜರಿದ್ದರು.

Related posts

Leave a Reply