Header Ads
Breaking News

ಡಿ.14 ಮತ್ತು 15ರಂದು ಕುಸ್ತಿ ಪಂದ್ಯಾಟ : ಸುರತ್ಕಲ್‌ನ ಬದ್ರಿಯಾ ಹೆಲ್ತ್ ಲೀಗ್ ವತಿಯಿಂದ ಆಯೋಜನೆ

ಸುರತ್ಕಲ್‌ನ ಬದ್ರಿಯಾ ಹೆಲ್ತ್ ಲೀಗ್ ವತಿಯಿಂದ, 45ನೇ ವರ್ಷದ ಕರಾವಳಿಯ ಪ್ರಸಿದ್ಧ ಬೆಳ್ಳಿ ಗದೆಯ ’ತುಳುನಾಡ ಕೇಸರಿ’, ’ತುಳುನಾಡ ಕುಮಾರ’, ’ಮಾಸ್ಟರ್ ಶಿವಾಜಿ’ ಮಹಿಳೆಯರಿಗಾಗಿ ’ತುಳುನಾಡ ಕುವರಿ’ ಪ್ರಶಸ್ತಿಗಳಿಗಾಗಿ ಕುಸ್ತಿ ಪಂದ್ಯಾಟವು ಡಿ.14 ಮತ್ತು 15ರಂದು ಸುರತ್ಕಲ್‌ನ ಗುಡ್ಡೆಕೊಪ್ಲ ಮೈದಾನದಲ್ಲಿ ನಡೆಯಲಿದೆ ಎಂದು ದ.ಕ ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಗೌರವಾಧ್ಯಕ್ಷ ಎಂ ಸುರೇಶ್ಚಂದ್ರ ಶೆಟ್ಟಿ ಹೇಳಿದ್ರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಕುಸ್ತಿ ಪಂದ್ಯಾಟದ ಜೊತೆಗೆ ಇನ್ನಿತರ ದೇಹ ತೂಕ ವಿಭಾಗದ ಮತ್ತು ಮಹಿಳಾ ಕುಸ್ತಿ ಸ್ಪರ್ಧೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದ್ರು. ಈ ಸಂದರ್ಭ ದ.ಕ ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಜುಲ್ಫಿಕರ್, ಗೌರವ ಸಲಹೆಗಾರ ಸುಖಪಾಲ್ ಸಾಲ್ಯಾನ್, ಬದ್ರಿಯಾ ಹೆಲ್ತ್ ಲೀಗ್‌ನ ಅಧ್ಯಕ್ಷ ಜೀಶಾನ್ ಅಲಿ, ಕ್ರೀಡಾ ಕಾರ್ಯದರ್ಶಿ ನವೀದ್ ಇರ್ಷಾದ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *