Header Ads
Header Ads
Breaking News

ಡಿ.15ರಂದು ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವ

ಕರಾವಳಿ ಕರ್ನಾಟಕದ ಸಾಹಿತ್ಯ -ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವವು ಡಿಸೆಂಬರ್ 15ರಂದು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದರು.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇರಳಕಟ್ಟೆ ವಿದ್ಯಾರತ್ನ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಆಡಳಿತ ನಿರ್ದೇಶಕ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಮಾಹಿತಿ ನೀಡಿ, ದೇರಳಕಟ್ಟೆ ಬೆಳ್ಮ ಪಂಚಾಯತ್ ವಠಾರದಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಸಾಂಸ್ಕೃತಿಕ ದಿಬ್ಬಣ ಹೊರಡಲಿದ್ದು, ವಿಜಯ ಕೃಷ್ಣಪ್ಪ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ರತ್ನ ಎಜ್ಯುಕೇಶನ್‌ನ ಟ್ರಸ್ಟಿ ರತ್ನಾವತಿ ಕೆ. ಶೆಟ್ಟಿ ಅವರು ಧ್ವಜಾರೋಹಣ ಮಾಡಲಿರುವರು. ಅಲ್ಲದೆ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿ, ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಶಾಲಾ ಮುಖ್ಯೋಪಧ್ಯಾಯರಾದ ನಹೀಮ್ ಹಮೀದ್, ಸಂಸ್ಥೆಯ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ಉಪಸ್ಥಿತರಿದ್ದರು.

Related posts

Leave a Reply