Header Ads
Header Ads
Breaking News

ಡಿ. 15, 16ರಂದು ಚಿತ್ರಾಪುರದಲ್ಲಿ ಜಿಲ್ಲಾಮಟ್ಟದ ಯುವಜನ ಮೇಳ 2018-19 ಜರಗಲಿದೆ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ತಾಲೂಕು ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಹಾಗೂ ತಣ್ಣೀರುಬಾವಿ ಯುವಕ ಮಂಡಲದ ಆಶ್ರಯದಲ್ಲಿ ಡಿಸೆಂಬರ್ 15,16ರಂದು ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ಮೈದಾನದಲ್ಲಿ ಮತ್ತು ಶ್ರೀ ಕೃಷ್ಣ ರಂಗಮಂದಿರ ತಣ್ಣೀರುಬಾವಿ, ಒಟ್ಟು ಎರಡು ಕಡೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ 2018-19 ಜರಗಲಿದೆ ಎಂದು ಚಿತ್ರಾಪುರ ಕುಳಾಯಿ ತಣ್ಣೀರುಬಾವಿ ಯುವಕ ಮಂಡಲದ ಸಂಚಾಲಕ ಸುರೇಂದ್ರ ಬಂಗೇರ ತಿಳಿಸಿದರು.

ಅವರು ಮಂಗಳೂರಿನ ಪತ್ರಿಕಾಭವನದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಯುವಜನ ಮೇಳದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಾವಣೆಗೊಂಡ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ತಾಲೂಕಿನ ಕ್ರಿಯಾಶೀಲ ಯುವಕ- ಯುವತಿ ಮಂಡಲದ 15ರಿಂದ 35 ವರ್ಷದೊಳಗಿನ ಸದಸ್ಯರುಗಳು ಭಾಗವಹಿಸಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯುವಕ ಮಂಡಲದ ಅಧ್ಯಕ್ಷ ಯಶೋಧರ ಕರ್ಕೆರಾ, ಯುವಜನ ಮೇಳ ಸಂಘಟನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಶ್ರೀಯಾನ್, ಮಧುಕರ್ ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply