Header Ads
Header Ads
Breaking News

ಡಿ.16ರಂದು ಕದ್ರಿಯ ಯುದ್ಧ ಸ್ಮಾರಕದಲ್ಲಿ ವಿಜಯ್ ದಿವಸ ಕಾರ್ಯಕ್ರಮ

ಭಾರತೀಯ ವೀರಯೋಧರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುವ ಉದ್ದೇಶದಿಂದ ವಿಜಯ್ ದಿವಸವನ್ನು ಆಚರಿಸಲಾಗುವುದು. ಡಿಸೆಂಬರ್ 16ರಂದು ಮಂಗಳೂರಿನ ಕದ್ರಿ ಹಿಲ್ಸ್‌ನಲ್ಲಿರುವ ಯೋಧರ ಯುದ್ಧ ಸ್ಮಾರಕದಲ್ಲಿ ನಮನ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಬಾಲಕೃಷ್ಣ ಅವರು ತಿಳಿಸಿದರು.

ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯ ದಿವಸವನ್ನು ನಮ್ಮ ದೇಶದಲ್ಲಿ ಡಿಸೆಂಬರ್ ೧೬ರಂದು ಆಚರಿಸುವುದು ರೂಢಿಯಾಗಿದೆ. 1971ನೇ ಇಸವಿ ಡಿಸೆಂಬರ್ 16ರಂದು ಭಾರತವು ಪಾಕಿಸ್ತಾನದ ಮೇಲೆ ವಿಜಯ ಸಾಧಿಸಿದ ದಿನವಿದು ಎಂದ ಅವರು ಡಿಸೆಂಬರ್ 16ರಂದು ಮಂಗಳೂರಿನ ಕದ್ರಿ ಹಿಲ್ಸ್‌ನಲ್ಲಿರುವ ಯೋಧರ ಯುದ್ಧ ಸ್ಮಾರಕಕ್ಕೆ ಹೂಹಾರ ಅರ್ಪಿಸಿ, ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ರಾಘವೇಂದ್ರ ಭಟ್, ಎನ್.ಎಸ್. ಭಂಡಾರಿ, ದೀಪಕ್ ಅಡ್ಯಂತಾಯ ಉಪಸ್ಥಿತರಿದ್ದರು.

Related posts

Leave a Reply