Header Ads
Header Ads
Breaking News

ಡಿ.16ರಿಂದ22ರ ವರೆಗೆ ಕೊಡಿಯಲ್ ಬೈಲ್‌ನ ಶಾರದಾವಿದ್ಯಾಲಯದ ಅಂಗಣದಲ್ಲಿ ಶ್ರೀಮದ್ ಭಾಗವತ ಸಪ್ತಾಹ ಪ್ರವಚನ

ಶ್ರೀಮದ್ ಭಾಗವತ ಸಪ್ತಾಹ ಪ್ರವಚನವು ಡಿಸೆಂಬರ್ 16 ರಿಂದ 22 ರವರೆಗೆ ಸಂಜೆ 5.20ರಿಂದ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣರ ಎಸೋಸಿಯೇಶನ್ ಮತ್ತು ತುಳುನಾಡು ಎಜ್ಯುಕೇಶನಲ್ ಟ್ರಸ್ಟ್‌ನ ಆಶ್ರಯದಲ್ಲಿ ಕೊಡಿಯಲ್ ಬೈಲ್‌ನ ಶಾರದಾವಿದ್ಯಾಲಯದ ಅಂಗಣದಲ್ಲಿ ನಡೆಯಲಿರುವುದು ಎಂದು ಪ್ರೊ. ಎಂ ಬಿ ಪುರಾಣಿಕ್ ತಿಳಿಸಿದರು.

ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಸಿದ್ಧ ಪ್ರವಚನಕಾರರಾದ ಹುಬ್ಬಳ್ಳಿ ಶ್ರೀಹರಿ ವಾಳ್ವೇಕರ್ ಕಾರ್ಯಕ್ರಮವು ನಡೆಯಲಿದ್ದು, ಪ್ರತೀದಿನ ಸಂಜೆ5 ರಿಂದ ವಿವಿಧ ಮಾತೃಮಂಡಳಿಯವರಿಂದ ಶ್ರೀ ಭಗವನ್ನಾಮ ಸಂಕೀರ್ತನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಸುಧಾಕರ್ ರಾವ್ ಪೇಜಾವರ, ಸದಸ್ಯರುಗಳಾದ ಕೆ ಎಸ್ ಕಲ್ಲೂರಾಯ, ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.

Related posts

Leave a Reply