Header Ads
Header Ads
Breaking News

ಡಿ. 19ರಂದು ಜುಮ್ಮಾ ಮಸೀದಿ ಕುಂಡೂರಿನ ನುಸ್ರತುಲ್‌ಇಸ್ಲಾಂ ಸಮಿತಿಯ ವಾರ್ಷಿಕೋತ್ಸವ

ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ಇತಿಹಾಸ ಪ್ರಸಿದ್ಧ ಕೇಂದ್ರ ಜುಮ್ಮಾ ಮಸೀದಿ ಕುಂಡೂರು ಇದರ ಅಂಗಸಂಸ್ಥೆಯಾದ ನುಸ್ರತುಲ್ ಇಸ್ಲಾಂ ಸಮಿತಿಯ ೪೦ನೇ ವಾರ್ಷಿಕೋತ್ಸವ ಡಿಸೆಂಬರ್ 19ರಂದು ಮದಕ ಪರಿಯಕ್ಕಳ ಕುಂಡೂರು ಕೇಂದ್ರ ಜುಮ್ಮಾ ಮಸೀದಿಯ ವಠಾರದಲ್ಲಿ ಜರುಗಲಿದೆ. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷರಾದ ರಫೀಕ್ ಅಂಬ್ಲಮೊಗರು ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವಾಗ್ಮಿ ಬಹು| ಸಿಂಸಾರುಲ್ ಹಕ್ ಹುದಮಿ ಅವರು ಕುರ್ ಆನ್ ಕರೆಯುತ್ತಿದೆ ಒಳಿತಿನೆಡೆಗೆ ಎಂಬ ವಿಷಯದ ಬಗ್ಗೆ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮವನ್ನ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಉದ್ಘಾಟನೆ ಮಾಡಲಿದ್ದಾರೆ. ಅಸ್ಸಯ್ಯಿದ್ ಕೆ.ಎಸ್.ಮುಹಮ್ಮದ್ ಶಮೀಮ್ ತಂಙಳ್ ಅವರು ದುವಾ ನೆರೆವೇರಿಸಲಿದ್ದಾರೆ ಎಂದು ತಿಳಿಸಿದರು.

Related posts

Leave a Reply