Header Ads
Header Ads
Breaking News

ಡಿ.2 ರಂದು ಬಂಟ್ವಾಳ ತಾಲೂಕು ಬಂಟರ ವಾರ್ಷಿಕ ಕ್ರೀಡೋತ್ಸವ

ಬಂಟ್ವಾಳ : ಬಂಟ್ವಾಳ ತಾಲೂಕು ಬಂಟರ ಸಂಘದ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ವಲಯ ಬಂಟರ ಸಂಘದ ಸಹಯೋಗದೊಂದಿಗೆ ವಾರ್ಷಿಕ ಕ್ರೀಡೋತ್ಸವವು ದಶಂಬರ್ 2 ರಂದು ತಾಲೂಕಿನ ಸಜೀಪ ಶ್ರೀಕ್ಷೇತ್ರ ಮಿತ್ತಮಜಲು ಸಂಕೇಶ ಮೈದಾನದಲ್ಲಿ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ ತಿಳಿಸಿದ್ದಾರೆ. 

ಅವರು ಬಂಟರ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಕ್ರೀಡೋತ್ಸವವು ಸಜೀಪ ಬಂಟರ ವಲಯದ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತಿದ್ದು, ಬೆಳಿಗ್ಗೆ ಕ್ರೀಡೋತ್ಸವಕ್ಕೆ ಮುನ್ನ 14ವಲಯ ಬಂಟರ ಸಂಘಗಳಿಂದ ಆಕರ್ಷಕ ಪಥಸಂಚಲನವು ನಡೆಯಲಿದೆ ಎಂದರು. ಎಲ್ಲಾ ಗುಂಪು ಮತ್ತು ಸ್ವತಂತ್ರ ಸ್ಪರ್ಧೆಗಳ ಏಕಕಾಲಕ್ಕೆ ಆರಂಭವಾಗಲಿದ್ದು, ಸ್ವತಂತ್ರ, ಸಮೂಹ, ಮನೋರಂಜನ ಸ್ಪರ್ಧೆಗಳು ನಡೆಯಲಿದೆ ಎಂದು ವಿವರಿಸಿದರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಂಭೈ ಪನ್ವೇಲ್ ನ ಕಾರ್ಪೊರೇಟರ್ ಸಂತೋಷ ಶೆಟ್ಟಿ ದಲಂಬಿಲ, ಮುಂಬೈಯ ಉದ್ಯಮಿ ಆನಂದ ರೈ ಮಾಡಂತಾಡಿಗುತ್ತು ಅವರು ಅತಿಥಿಯಾಗಿ ಭಾಗವಹಿಸಲಿದ್ದು, ಕ್ರೀಡಾಕೂಟದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವ ಕ್ರೀಡಾಳುಗಳನ್ನು ಗೌರವಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಚಂದ್ರಹಾಸ ಶೆಟ್ಟಿ ರಂಗೋಲಿ,ಜಗದೀಶ ಶೆಟ್ಟಿ ಇರಾಗುತ್ತು, ನವೀನಚಂದ್ರ ಶೆಟ್ಟಿ ಮುಂಡಾಜೆಗುತ್ತು, ಕಿರಣ್ ಹೆಗ್ಡೆ ಅನಂತಾಡಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಪಿ.ರೈ, ಕ್ರೀಡೋತ್ಸವ ಸಮಿತಿ ಸಂಚಾಲಕ ಗಂಗಾಧರ ರೈ, ಸಜೀಪ ವಲಯ ಬಂಟರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ,ಜಗದೀಶ್ ಮೊದಲಾದವರಿದ್ದರು.

Related posts

Leave a Reply