Header Ads
Header Ads
Breaking News

ಡಿ.21ರಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರ : ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ

 ಅಖಿಲ ಭಾರತೀಯ ಅಧಿಕಾರಿಗಳ ಸಂಘ ಡಿ.೨೧ರಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿಯಲ್ಲೂ ಕೂಡಾ ಮುಷ್ಕರ ನಡೆಯಲಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ವರ್ಗದ ರಾಷ್ಟ್ರೀಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾಹಿತಿ ನೀಡಿದರು. ಅನೇಕ ಬೇಡಿಕೆಯನ್ನು ಮುಂದಿಟ್ಟು ಈ ಮುಶ್ಕರ ನಡೆಸಲಾಗುತ್ತಿದೆ. ಸಂಪೂರ್ಣ ಮೆಂಡೆಟನ್ನು ಜಾರಿ ಮಾಡುವುದು, ವೇತನ ಪರಿಷ್ಕರಣೆ ಜಾರಿಗೆ ಗೊಳಿಸುವುದು, ನಿವೃತ್ತ ಬ್ಯಾಂಕ್ ಗಳ ಉದ್ಯೋಗಿಗಳಿಗೆ ಪಿಂಚಣಿ ಸುಧಾರಣೆ, ನೂತನ ಪಿಂಚಣಿ ಪದ್ದತಿ ರದ್ದು ಮಾಡಬೇಕು, ಬ್ಯಾಂಕ್ ಆಫ್ ಬರೋಡ, ವಿಜಯಾಬ್ಯಾಂಕ್ ವಿಲೀನಕ್ಕೆ ವಿರೋಧ ಹೀಗೆ ಅನೇಕ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

Related posts

Leave a Reply