Header Ads
Header Ads
Breaking News

ಡಿ.22: ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲಾ ಮತ್ತು ಕಾಲೇಜಿನ ವಾರ್ಷಿಕೋತ್ಸವ

 

ಮಂಗಳೂರು: ಮಂಗಳೂರಿನ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆ ಮತ್ತು ಕಾಲೇಜಿನ ವಾರ್ಷಿಕೋತ್ಸವ ಡಿಸೆಂಬರ್ 22ರಂದು ಶಾಲಾ ಆವರಣದಲ್ಲಿ ಜರುಗಲಿದೆ ಎಂದು ಶಾಲಾ ಶಿಕ್ಷಕಿ ಸುಜಯಲಕ್ಷ್ಮೀ ಹೇಳಿದರು.

ಈ ಕುರಿತು ಮಂಗಳೂರಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದಿ ಶಾಸಕ ಡಿ.ವೇದವ್ಯಾಸ್ ಕಾಮತ್, ನಗರ ಪೊಲೀಸ್ ಆಯುಕ್ತರಾದ ಟಿ.ಆರ್.ಸುರೇಶ್ ಭಾಗವಹಿಸಲಿದ್ದಾರೆ. ಇವರೊಂದಿಗೆ ಸೂರಜ್ ಇಂಟರ್ ನ್ಯಾಶನಲ್ ಮತ್ತು ಚಾರಿಟೇಬಲ್‍ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್ ಎಸ್.ರೇವ್ಣಕರ್, ಕಣಚೂರು ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಅಧ್ಯಕ್ಷರಾದ ಹಾಜಿ.ಯು.ಕೆ ಮೋನು ಕಣಚೂರ್ ಸೇರಿದಂತೆ ಇನ್ನಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕೋತ್ಸವಕ್ಕೆ ಪ್ರತಿ ವರ್ಷ ಒಂದು ನಿಶ್ಚಿತ ವಿಷಯವನ್ನು ನಿಗದಿಪಡಿಸಲಾಗುತ್ತದೆ. ಅದರಂತೆ ಈ ವರ್ಷವೂ ಸ್ಪೆಕ್‍ಟರ್ಮ್ ಎಂಬ ವಿಷಯಕ್ಕೆ ಅನುಗುಣವಾಗಿ ಪ್ರಾಕೃತಿಕ ವರ್ಣಗಳಿಂದ ಕೂಡಿದ ಸಾಂಸ್ಕøತಿಕ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅದ್ಬುತ ಪ್ರತಿಭೆಯನ್ನ ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಶಾಲಾ ಪ್ರಾಚಾರ್ಯರಾದ ರೋಝಾ ಫಯಾಝ್ , ಶರ್ಮಿಳಾ, ನಿಭಾ ಪಲಹ್ ಸೇರಿದಂತೆ ಉಪಸ್ಥಿತರಿದ್ದರು.

Related posts

Leave a Reply