Header Ads
Header Ads
Breaking News

ಡಿ. 22: ಭಂಡಾರಿ ಬಿಲ್ಡರ್ಸ್ ವತಿಯಿಂದ ನಿರ್ಮಾಣಗೊಂಡ ಮಲ್ಲಿಕಟ್ಟೆ ವೃತ್ತ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಭಂಡಾರಿ ಬಿಲ್ಡರ್ಸ್ ವತಿಯಿಂದ ನಿರ್ಮಾಣಗೊಂಡಿರುವ ಮಲ್ಲಿಕಟ್ಟೆ ವೃತ್ತವೂ ಡಿಸೆಂಬರ್ 22ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಭಂಡಾರಿ ಬಿಲ್ಡರ್ಸ್‍ನ ಸಲಹೆಗಾರ ವೇಣು ಶರ್ಮಾ ಹೇಳಿದರು.

ಈ ಕುರಿತು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಮೇಯರ್ ಭಾಸ್ಕರ್.ಕೆ ಮೊಯ್ಲಿ ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಈ ವೃತ್ತ ಉದ್ಘಾಟನೆಗೊಳ್ಳಲಿದೆ. ಬಿಜೈಯಲ್ಲಿ ವಿವೇಕಾನಂದ ಪಾಕ್ ನಿರ್ಮಿಸಿದೆ. ಕದ್ರಿ ರಸ್ತೆಯಲ್ಲಿ ವಿಶೇಷ ರೀತಿಯ ದೈವತ್ವದ ಕಾರಂಜಿ ರೂಪಿತ ವೃತ್ತದ ಕಲಾಕೃತಿ ಜನಾಕರ್ಷಕವಾಗಿದ್ದು, ನಗರವನ್ನು ಮತ್ತಷ್ಟು ಸುಂದರಗೊಳಿಸಿದೆ. ಮಲ್ಲಿಕಟ್ಟೆ ಸಮೀಪದಲ್ಲಿ ಪರಿಸರ ಉಳಿಸುವ ಹಾಗೂ ಜಾಗೃತಿ ಮೂಡಿಸುವ ಅಪೂರ್ವ ಕೈ ಆಕಾರದ ಕಲಾಕೃತಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಕಾರ್ಪೋರೇಟರ್ ಆಶೋಕ್ ಡಿ.ಕೆ., ಕಲಾವಿದ ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.

Related posts

Leave a Reply