Header Ads
Header Ads
Breaking News

ಡಿ.23ರಂದು ಐವನ್ ಡಿಸೋಜಾ ನೇತೃತ್ವದಲ್ಲಿ ಭಾವೈಕ್ಯತಾ ಸಂಗಮ ಕ್ರಿಸ್ಮಸ್ ಸಂಭ್ರಮಾಚರಣೆ

ವಿಧಾನ ಪರಿಷತ್‌ನ ಶಾಸಕರಾದ ಐವನ್ ಡಿಸೋಜರವರ ನೇತೃತ್ವದಲ್ಲಿ ೩ನೇ ವರ್ಷದ ಭಾವೈಕ್ಯತೆಯ ಸಂಗಮ ಕ್ರಿಸ್ಮಸ್ ಸಂಭ್ರಮಾಚರಣೆಯು ಡಿಸೆಂಬರ್ 23ರಂದು ಮಂಗಳೂರಿನ ಕಂಕನಾಡಿ ಮಾರುಕಟ್ಟೆಯ ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಂಡಿದ್ದಾರೆ.

ಈ ಬಗ್ಗೆ ಮಂಗಳೂರಿನ ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾವ್ಯಕ್ಯತೆಯ ಕ್ರಿಸ್ಮಸ್ ಸಂಭ್ರಮಾಚರಣೆ ನಡೆಸಲಿದ್ದು, ಕ್ಯಾರಲ್ ಸ್ಪರ್ಧೆ, ಸಂತಕ್ಲಾಸ್ ಸ್ಪರ್ಧೆ, ನಕ್ಷತ್ರ ಸ್ಪರ್ಧೆ, ಕೇಕ್ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೇವೆ. ಈ ಸಮಾರಂಭಕ್ಕೆ ನಗರ ಎಲ್ಲಾ ಚರ್ಚ್‌ಗಳಿಗೆ, ಸಂಘ-ಸಂಸ್ಥೆಗಳಿಗೆ ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸುವುವರೇ ಆಹ್ವಾನ ಪತ್ರ ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತಾದವರಿಗೆ ನಗದು ಬಹುಮಾನವನ್ನು ಹಾಗೂ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಸರ್ಟಿಫಿಕೇಟ್‌ಗಳನ್ನು ನೀಡಿ ಗೌರವಿಸಲಾಗುವುದು.

ಸಭಾ ಕಾರ್ಯಕ್ರಮವು ಸಂಜೆ 6.30ಕ್ಕೆ ಜರುಗಲಿದ್ದು, ಕೇಮಾರು ಮಠಾಧೀಶರಾದ ಈಶ ವಿಠಲದಾಸ ಸ್ವಾಮೀಜಿಯವರು ಉದ್ಘಾಟಿಸಲಿರುವರು, ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಸಚಿವ ಯು.ಟಿ. ಖಾದರ್ ಭಾಗವಹಿಸಲಿರುವರು ಎಂದು ಮಾಹಿತಿ ನೀಡಿದರು.ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Related posts

Leave a Reply