Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಡಿ.24ರಂದು ಕೃಷ್ಣಾಪುರದಲ್ಲಿ ನಾಗಮಂಡಲ ಸೇವೆ ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ಕೆ.ಸಿ.ನಾಗೇಂದ್ರ ಬಾರಧ್ವಾಜ್ ಹೇಳಿಕೆ

ಪಣಂಬೂರು ಶ್ರೀಕೋಡ್ದಬ್ದು ದೇವಸ್ಥಾನದ ನಾಗ ಮಂಡಲ ಸೇವಾ ಸಮಿತಿ ವತಿಯಿಂದ ಡಿಸೆಂಬರ್ 24ರಂದು ನಾಗದೇವರ ಸನ್ನಿಧಿಯ ಬಳಿಯಿರುವ ನಾರಾಯಣ ಶೆಟ್ಟಿಯರ ಬಯಲು ಗದ್ದೆಯಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ ಎಂದು ಅಧ್ಯಕ್ಷ ಕೆ.ಸಿ.ನಾಗೇಂದ್ರ ಬಾರಧ್ವಾಜ್ ಹೇಳಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದ ಮೂರ್ತಿ ಐ.ರಮಾನಂದ ಭಟ್ ಇವರ ಪೌರೋಹಿತ್ಯದಲ್ಲಿ ನಾಗಮಂಡಲ ನಡೆಯಲಿದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಡಿ.24ರಂದು ಪೂರ್ವಾಹನ್ನ ಕಲಶಾಭಿಷೇಕ, ಆಶ್ಲೇಷ ಬಲಿ, ರಾತ್ರಿ 8ಗಂಟೆಗೆ ಹಾಲಿಟ್ಟು ಸೇವೆಯ ಬಳಿಕ 11 ಗಂಟೆಯ ನಾಗಮಂಡಲ ಸೇವೆ ನಡೆಯಲಿದೆ. ಸಂಜೆ 7ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಲಕ್ಷ್ಮೀವರ ತೀರ್ಥ ಸ್ವಾಮೀಜಿ, ವಿದ್ಯಾಪಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನಗೈಯಲಿದ್ದಾರೆ ಎಂದು ತಿಳಿಸಿದರು.

Related posts

Leave a Reply