Header Ads
Header Ads
Header Ads
Breaking News

ಡಿ.25ರಂದು ನೃತ್ಯ ನಿಕೇತನ ಕೊಡವೂರಿನ ತ್ರಿದಶಮಾನ ನರ್ತನಯಾನ ಉದ್ಘಾಟನಾ ಕಾರ್ಯಕ್ರಮ

ನೃತ್ಯ ನಿಕೇತನ ಉಡುಪಿ ಇದರ ತ್ರಿದಶಮಾನ ವರ್ಷದ ಆಚರಣೆಯ ಉದ್ಘಾಟನಾ ಸಮಾರಂಭ ಡಿಸೆಂಬರ್ ಇಪ್ಪತೈದರಂದು ಅಂಬಲಪಾಡಿ ದೇವಲದ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. 

ಉಡುಪಿಯಲ್ಲಿ ಈ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಲಕ್ಷ್ಮೀ ಗುರುರಾಜ್ ಮಾಹಿತಿ ನೀಡಿದರು. ಇದೇ ದಿನ ತ್ರಿ ದಶಮಾನ ವರುಷವಿಡೀ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದೆ. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬಿ ವಿಜಯ ಬಲ್ಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ನಿಕೇತನ ಉಡುಪಿ ತಂಡದ ಕಲಾವಿದರಿಂದ ಕುಂದಾಪುರ ನಾರಾಯಣ ಐತಾಳ್ ವಿರಚಿತ ರಾಸಲೀಲೆ ಹಾಗೂ ಉಪ್ಪಂಗಳ ರಾಮಭಟ್ ವಿರಚಿತ ಕನಕ ಮೃಗ ನೃತ್ಯ ರೂಪಕಗಳು ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್ ಪ್ರಭು, ವಿದುಷಿ ವಿದ್ಯಾ ಸಂದೇಶ್, ಶಾಂಭವಿ ಶಮಾ ಗುರುರಾಜ್ ಐತಾಳ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *