Header Ads
Header Ads
Breaking News

ಡಿ.28ರಿಂದ 30ರತನಕ ಪಣಂಬೂರ್ ಕಿನಾರೆಯಲ್ಲಿ ಬೀಚ್ ಫೆಸ್ಟಿವಲ್ : ಮಂಗಳೂರಲ್ಲಿ ನಡೆದ ಆಡಿಷನ್ ರೌಂಡ್ಸ್

 ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಡಿಸೆಂಬರ್ 28ರಿಂದ 30ರ ತನಕ ಪಣಂಬೂರಿನಲ್ಲಿ ಬೀಚ್ ಫೆಸ್ಟಿವಲ್ ನಡೆಯಲಿದ್ದು, ಈ ಪ್ರಯುಕ್ತ ಬೀಚ್ ಫೆಸ್ಟಿವಲ್‌ನ ಸಾಂಸ್ಕೃತಿಕ ಕಾರ್ಯಕ್ರಮದ ಕಲಾವಿದರ ಆಯ್ಕೆ ಪ್ರಕ್ರಿಯೆ ಮಂಗಳೂರಲ್ಲಿ ಜರುಗಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವದ ಪ್ರಯುಕ್ತ ಪಣಂಬೂರು ಕಡಲ ಕಿನಾರೆಯಲ್ಲಿ ಬೀಚ್ ಫೆಸ್ಟಿವಲ್ ನಡೆಯಲಿದ್ದು, ಮೂರು ದಿನಗಳ ಕಾಲ ನಡೆಯುವ ಬೀಚ್ ಫೆಸ್ಟಿವಲ್‌ನಲ್ಲಿ ಕಲಾವಿದರ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.ಈ ಪ್ರಯುಕ್ತ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆ ನಡೆಯಿತು. ವೈಯಕ್ತಿಕ ವಿಭಾಗದಲ್ಲಿ ಕನ್ನಡ, ಹಿಂದಿ, ತುಳು ಗಾಯನ ಸ್ಪರ್ಧೆ ಹಾಗೂ ಸಮೂಹ ಗಾಯನ ಸ್ಪರ್ಧೆಯನ್ನ ನಡೆಸಲಾಯ್ತು, ಮಾತ್ರವಲ್ಲದೇ ೫೦ ವರುಷ ಮೇಲ್ಪಟವರಿಗೂ ಪ್ರತ್ಯೇಕ ಗಾಯನ ಸ್ಪರ್ಧೆ ಹಾಗೂ ಸಮೂಹ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಗರದ ವಿವಿಧ ಕಡೆಗಳಿಂದ ಆಗಮಿಸಿದ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನ ತೋರ್ಪಡಿಸಿದ್ರು. ಇನ್ನು ತೀರ್ಪುಗಾರಾಗಿ ನವೀನ್ , ಪ್ರೇಮನಾಥ್, ಕೆ.ಕೆ.ಪೇಜಾವರ್, ವಿ.ಜೆ.ವಿನೀತ್ ಪಾಲ್ಗೊಂಡಿದ್ರು. ಈ ವೇಳೆ ನಿವೃತ್ತ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಸುರೇಶ್ ಕುಮಾರ್, ಇಂಡಿಯನ್ ರೆಡ್ ಕ್ರಾಸ್ ರಾಜ್ಯ ಘಟಕದ ಪ್ರತಿನಿಧಿ ರವಿ ಉಚ್ಚಿಲ್ ,ಬೀಚ್ ಉತ್ಸವ ಸಮಿತಿ ಅಧ್ಯಕ್ಷರಾದ ಯತೀಶ್ ಬೈಕಂಪಾಡಿ ಪಾಲ್ಗೊಂಡಿದ್ರು. ಇನ್ನು ಆಡಿಷನ್ ರೌಂಡ್ಸ್‌ನಲ್ಲಿ ಆಯ್ಕೆಯಾದ ಸ್ಪರ್ಧಿಗಳು ಮೂರು ದಿನಗಳ ಕಾಲ ನಡೆಯಲಿರುವ ಬೀಚ್ ಫೆಸ್ಟಿವಲ್‌ನಲ್ಲಿ ತಮ್ಮ ಪ್ರತಿಭೆಯನ್ನ ತೋರ್ಪಡಿಸಲಿದ್ದಾರೆ.

Related posts

Leave a Reply