Header Ads
Header Ads
Breaking News

ಡಿ.28,29,30ರಂದು ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ 2018-19

ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ 2018-19ರ ಪ್ರಯುಕ್ತ ಕರಾವಳಿ ಕ್ಯಾರಿಕೇಚರ್‍ಸ್ ವ್ಯಂಗ್ಯ ಚಿತ್ರಗಳ ಪ್ರದರ್ಶನ ಮತ್ತು ಮಕ್ಕಳಿಗಾಗಿ ವ್ಯಂಗ್ಯ ಚಿತ್ರ ಬರೆಯುವ ಸ್ಪರ್ಧೆ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಡೆಯಿತು.ಡಿಸೆಂಬರ್ 28,29,30ರಂದು ಮೂರು ದಿನಗಳ ಕಾಲ ನಡೆಯಲಿರುವ ಕರಾವಳಿ ಕ್ಯಾರಿಕೇಚರ್‍ಸ್ ವ್ಯಂಗ್ಯ ಚಿತ್ರಗಳ ಪ್ರದರ್ಶನ ಮತ್ತು ವ್ಯಂಗ್ಯ ಚಿತ್ರ ಬರೆಯುವ ಸ್ಪರ್ದೆಗೆ ಕರಾವಳಿಯ ಜನತೆಯಿಂದ ಉತ್ತಮ ಪ್ರತಿಕ್ರೀಯೆ ದೊರಕ್ಕಿದ್ದು ಅನೇಕ ಮಂದಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.ಈ ವೇಳೆ ಕರಾವಳಿ ಉತ್ಸವ ಸಮಿತಿಯ ಸದಸ್ಯರಾದ ಮಂಜುನಾಥ್ ನಿಸರ್ಗ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ 2018-19ರ ಪ್ರಯುಕ್ತ ಕರಾವಳಿ ಕ್ಯಾರಿಕೇಚರ್‍ಸ್ ವ್ಯಂಗ್ಯ ಚಿತ್ರಗಳ ಪ್ರದರ್ಶನ ಮತ್ತು ಮಕ್ಕಳಿಗಾಗಿ ವ್ಯಂಗ್ಯ ಚಿತ್ರ ಬರೆಯುವ ಸ್ಪರ್ಧೆಯನ್ನು ಖ್ಯಾತ ವ್ಯಂಗ್ಯ ಚಿತ್ರಕಾರರ ಸಮ್ಮುಖದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.ಬಳಿಕ ಜಿಲ್ಲೆಯ ಖ್ಯಾತ ವ್ಯಂಗ್ಯಚಿತ್ರಕಾರ ಜೋನ್ ಚಂದ್ರನ್ ಮಾತನಾಡಿ ನಾವು ಕಳೆದ ವರ್ಷದಿಂದ ಕರಾವಳಿ ಉತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ.ಆದರೆ ಕಳೆದ ವರ್ಷ ಕರಾವಳಿಯ ಜನಜೀವನ ಎನ್ನುವ ವಿಚಾರದ ಕುರಿತು ಕಾರ್ಯಕ್ರಮವನ್ನು ನಡೆಲಾಗಿತ್ತು. ಈ ವರ್ಷ ಕರಾವಳಿಯ ಪ್ರಸಿದ್ಧ ವ್ಯಕ್ತಿಗಳ ಕ್ಯಾರಕೇಚರ್‍ಸ್‌ಅನ್ನು ಪ್ರದರ್ಶನಕ್ಕೆ ಇರಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭ ಖ್ಯಾತ ವ್ಯಂಗ್ಯಚಿತ್ರಕಾರರು ಮಕ್ಕಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Related posts

Leave a Reply