Header Ads
Header Ads
Breaking News

ಡಿ.29ರಂದು ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ

ಕಾರ್ಕಳದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 29ರಂದು ಒಂದು ದಿನದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಲ್ಲೂರು ಗಣಪತಿಕಟ್ಟೆ ಸಭಾಭವನದಲ್ಲಿ ನಡೆಯಲಿದೆ ಎಂದು ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ತಿಳಿಸಿದರು.

ನಗರದಲ್ಲಿ ಆಯೋಜಿಸಲಾದ ಹದಿನೈದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯ ಬಿಡುಗಡೆಯ ಸಂದರ್ಭ ಮಾತನಾಡಿದ ಅವರು ಮುನಿರಾಜ ರೆಂಜಾಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಲಿರುವರು.

ಶಾಸಕ ವಿ.ಸುನಿಲ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿರುವರು. ಬೆಳಿಗ್ಗೆ ಎರಡು ಗೋಷ್ಠಿಗಳಿದ್ದು ಸಾಹಿತ್ಯ ಮತ್ತು ಬದುಕಿನ ಕುರಿತು ಹರಿದಾಸ ಬಿಸಿ ರಾವ್ ಶಿವಪುರ ಮಾತನಾಡಲಿರುವರು. ನಂತರ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ತಾಲ್ಲೂಕಿನ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಲಿರುವರು. ಪ್ರಾದೇಶಿಕ ಭಾಷೆ ಹಾಗೂ ಕನ್ನಡದ ಕುರಿತು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಉಪನ್ಯಾಸ ನೀಡಲಿರುವರು.

ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳ 15ಮಂದಿ ಸಾಧಕರು ಸೇರಿದಂತೆ ನಗರದ ರೋಟರಿ ಸಂಸ್ಥೆ ಮತ್ತು ಯಕ್ಷಕಲಾ ರಂಗ ಸಂಸ್ಥೆಗಳನ್ನು ಗೌರವಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ದೇವದಾಸ ಕೆರೆಮನೆ, ಅರುಣ್ ರಾವ್, ದಿವಾಕರ ಶೆಟ್ಟಿ, ಗೋಪಾಲ ಮೂಲ್ಯ, ಶೈಲೇಂದ್ರ ರಾವ್, ಸಂದೀಪ ವಿ.ಪೂಜಾರಿ, ಶೇಖರ ಅಜೆಕಾರ್, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply