Header Ads
Header Ads
Breaking News

ಡಿ. 29ರಂದು “ಟಾಪ್ ಎಂಟರ್‌ಟ್ರೈನರ್‍ಸ್ ಡ್ಯಾನ್ಸ್ ಅಕಾಡೆಮಿ”ಗೆ ಬೆಳ್ಳಿ ಹಬ್ಬದ ಸಂಭ್ರಮ

ಮೂಡುಬಿದಿರೆ : ಯುವ ಕೊರಿಯೋಗ್ರಾಫರ್ ಆಗಿದ್ದ ಕಿರಣ್ ಕೋಟ್ಯಾನ್ ಅವರ ಮುಂದಾಳುತ್ವದಲ್ಲಿ1994ರಲ್ಲಿ ಮೂಡುಬಿದಿರೆಯ ಮೊದಲ ಡ್ಯಾನ್ಸ್ ತರಬೇತಿ ಕೇಂದ್ರವಾಗಿ ಸ್ಥಾಪನೆಗೊಂಡಿರುವ “ಟಾಪ್ ಎಂಟರ್‌ಟ್ರೈನರ್‍ಸ್ ಡ್ಯಾನ್ಸ್ ಅಕಾಡೆಮಿ”ಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಈ ನಿಟ್ಟಿನಲ್ಲಿ ಡಿ:೨೯ರಂದು “ರಿದಂ” ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರಮವು ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ ಎಂದು “ಟಾಪ್ ಎಂಟರ್‌ಟ್ರೈನರ್‍ಸ್ ಡ್ಯಾನ್ಸ್ ಅಕಾಡೆಮಿ”ಯ ಆಡಳಿತ ನಿರ್ದೇಶಕ ರೂಪೇಶ್ ಕುಮಾರ್ ತಿಳಿಸಿದ್ದಾರೆ. 

ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು. ಮೂಡುಬಿದಿರೆ ಸಹಿತ ಕಾರ್ಕಳ, ವೇಣೂರು, ಉಜಿರೆ, ಧರ್ಮಸ್ಥಳ, ಕೊಯ್ಯೂರು, ಬೈಪಾಡಿ, ನಾರಾವಿ, ಸಿದ್ಧಕಟ್ಟೆ ಮತ್ತು ಎಡಪದವು ಊರುಗಳಲ್ಲಿ ಈ ಕೇಂದ್ರಗಳು ಕಾರ್ಯಚರಿಸುತ್ತಿದ್ದು, ಇಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಇದಲ್ಲದೆ ಇದರ ಜೊತೆಗೆ ಆಯ್ದ ಹನ್ನೆರಡು ಶಾಲೆಗಳಲ್ಲಿ ಮೂರು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗದ ನೃತ್ಯಪಟುಗಳನ್ನಾಗಿ ರೂಪಿಸಲಾಗಿದೆ. ಶಾಲಾ ಕಾಲೇಜುಗಳಲ್ಲದೆ ಇನ್ನಿತರ ಹಲವಾರು ಸಂಘ ಸಂಸ್ಥೆಗಳ ಆಶ್ರಯದಲ್ಲಿಯು ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸಂಜೆ 5ಕ್ಕೆ ಉದ್ಘಾಟನೆಗೊಳ್ಳುವ “ರಿದಂ” ಕಾರ್ಯಕ್ರಮದಲ್ಲಿ ನಡೆಯುವ ಪೊಲೀಸ್ ಉಪ ನಿರೀಕ್ಷಕ ದೇಜಪ್ಪ, ಉದ್ಯಮಿಗಳಾದ ಮೇಘನಾದ ಶೆಟ್ಟಿ, ಅಬುಲ್ ಅಲಾ ಪುತ್ತಿಗೆ, ಬಿಜೆಪಿ ಜಿಲ್ಲಾ.ಪ್ರ.ಕಾರ್ಯದರ್ಶಿ ಸುದರ್ಶನ್ ಎಂ, ಕರ್ನಾಟಕ ಕರಾವಳಿ ಕೊರಿಯೋಗ್ರಾಫರ್‍ಸ್ ಅಸೋಸಿಯೇಷನ್‌ನ ಅಧ್ಯಕ್ಷ ರಾಜೇಶ್ ಕಣ್ಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ 7.30ಕ್ಕೆ ನಡೆಯುವ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸಂಭ್ರಮಾಚರಣೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರುಗಳಾದ ಕೆ.ಅಭಯಚಂದ್ರ ಜೈನ್, ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ/ಎಂ.ಮೋಹನ ಆಳ್ವ, ಎ.ಜೆ.ಆಸ್ಪತ್ರೆಯ ಅಧ್ಯಕ್ಷ ಡಾ/ಪ್ರಶಾಂತ್ ಮಾರ್ಲ, ಟಾಪ್ ಎಂಟರ್‌ಟೈನರ್‍ಸ್‌ನ ಸ್ಥಾಪಕಾಧ್ಯಕ್ಷ ಕಿರಣ್ ಕೋಟ್ಯಾನ್ ಭಾಗವಹಿಸಲಿದ್ದಾರೆ.
ಕರ್ನಾಟಕ ಕರಾವಳಿ ಕೊರಿಯೋಗ್ರಾಫರ್‍ಸ್ ಅಸೋಸಿಯೇಷನ್‌ನ ಅಧ್ಯಕ್ಷ ರಾಜೇಶ್ ಕಣ್ಣೂರು ಮತ್ತು ಟಾಪ್ ಎಂಟರ್‌ಟೈನರ್‍ಸ್‌ನ ಸ್ಥಾಪಕಾಧ್ಯಕ್ಷ ಕಿರಣ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply