Header Ads
Header Ads
Breaking News

ಡಿ 29 ಮತ್ತು 30 ರಂದು ಕೃಷಿ ಉತ್ಸವ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನ

ಮುಡಿಪು: ಕೈರಂಗಳದ ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಕೃಷಿ ಉತ್ಸವ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನವು ಡಿ. 29ಮತ್ತು 30ರಂದು ನಡೆಯಲಿದೆ ಎಂದು ಉತ್ಸವ ಸಮಿತಿ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ಅವರು ಹೇಳಿದರು.

ಅವರು ಪುಣ್ಯಕೋಟಿನಗರ ಶ್ರೀ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಯುವ ಜನತೆಯ ನಡೆ ಕೃಷಿ ಕ್ಷೇತ್ರದ ಕಡೆಗೆ ದ್ಯೇಯ ವಾಕ್ಯದೊಂದಿಗೆ ಉತ್ಸವ ನಡೆಯಲಿದ್ದು, ತೆಂಗು ಕೃಷಿ ಹಾಗೂ ಮೌಲ್ಯವರ್ದನೆ, ಗೇರು ಹಾಗೂ ಕರಿಮೆಣಸು, ಕೊಕ್ಕೊ ಬೆಳೆ ಸಂರಕ್ಷಣೆ ಮತ್ತು ಸಂವರ್ದನೆ, ಕೃಷಿ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪ್ರಭಾವ, ಅಡಿಕೆ ಬಳೆ ನಿರ್ವಹಣೆ ಹಾಗೂ ಆದರ್ಶ ಕೃಷಿಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೃಷಿ ಉತ್ಸವದಲ್ಲಿ ಕೃಷಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ, ಯಂತ್ರಗಳ ಪ್ರದರ್ಶನ, ಸುಧಾರಿತ ಕೃಷಿ ಪದ್ದತಿಗಳ ಪರಿಚಯ, ಕೃಷಿ ತೋಟಗಾರಿಕಾ ಇಲಾಖೆ ಮಳಿಗೆಗಳು, ಸಹಕಾರಿ ಸಂಘಗಳು ಭಾಗವಹಿಸಲಿವೆ ಎಂದರು.
ಕಾರ್ಯಕ್ರಮದಲ್ಲಿ ಆದರ್ಶ ಕೃಷಿಕರು. ಮತ್ತೆ ಕೃಷಿಯತ್ತ ಮುಖ ಮಾಡಿದ ಯುವಕರು, ಸಾಪ್ಟ್‌ವೇರ್ ಉದ್ಯೋಗ ತೊರೆದು ಕೃಷಿಯತ್ತ ಆಕರ್ಷಿತರಾದವರು ಹಾಗೂ ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಹಾಗೂ ಪ್ರತೀ ವರ್ಷ ಡಿಸೆಂಬರ್‍ನಲ್ಲಿ ಇಂತಹ ಕೃಷಿ ಉತ್ಸವವನ್ನು ಏರ್ಪಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಿವ್ಯರಾಜ್ ಶೆಟ್ಟಿ, ಶಾಲೆಯ ಪ್ರಾಂಶುಪಾಲೆ ದಿವ್ಯದೀಪ, ಶಿಕ್ಷಕ ಶ್ರೀ ಹರಿ ಉಪಸ್ಥಿತರಿದ್ದರು.

Related posts

Leave a Reply