Header Ads
Header Ads
Breaking News

ಡಿ.3 ರಂದು ಬೆಂಗಳೂರು ಚಲೋ ಚಳುವಳಿ: ಬಿ.ಎಂ. ಭಟ್ ಹೇಳಿಕೆ

ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ, ಡಿ.ಎ ಜಾರಿ ಹಾಗೂ ಬೀಡಿ ಉದ್ಯಮದಲ್ಲಿ ನಡೆಯುತ್ತಿರುವ ಸಾವಿರಾರು ಕೋಟಿ ರೂಪಾಯಿ ವಂಚನೆಯನ್ನು ತಡೆಯುವಂತೆ ಒತ್ತಾಯಿಸಿ ದಕ್ಷಿಣಕನ್ನಡ ಜಿಲ್ಲಾ ಬೀಡಿ ಕಾರ್ಮಿಕರ ಒಕ್ಕೂಟ ಡಿಸೆಂಬರ್ 3 ರಂದು ಬೆಂಗಳೂರು ಚಲೋ ಚಳುವಳಿಯನ್ನು ನಡೆಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎಂ. ಭಟ್ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು 2015 ರಲ್ಲಿ ಏರಿಕೆಯಾಗಿದ್ದು ತುಟ್ಟಿಭತ್ಯೆ 12.75 ನ್ನು ಕಳೆದ ಮೂರು ವರ್ಷಗಳಿಂದ ನೀಡದೆ ಬೀಡಿ ಮಾಲಕರು ಕಾರ್ಮಿಕರನ್ನು ಸತಾಯಿಸುತ್ತಿದ್ದಾರೆ. ಸುಮಾರು 8 ಲಕ್ಷದಷ್ಟಿರುವ ಬೀಡಿ ಕಾರ್ಮಿಕರಿಗೆ ತಲಾ 4 ಸಾವಿರದಷ್ಟು ಈ ಮೊತ್ತ ಸಿಗಬೇಕಿದ್ದು, ಬೀಡಿ ಕಂಪನಿಗಳು 900 ಕೋಟಿ ರೂಪಾಯಿಗಳನ್ನು ನೀಡಲು ಬಾಕಿಯಿದೆ ಎಂದು ಅವರು ಮಾಹಿತಿ ನೀಡಿದರು. ಅಲ್ಲದೆ ಕನಿಷ್ಟ ಕೂಲಿಯನ್ನೂ ಮಾಲಕರು ಕಾರ್ಮಿಕರಿಗೆ ನೀಡದೆ ವಂಚಿಸುತ್ತಿದ್ದು, ಈ ಎಲ್ಲಾ ವಿಚಾರಗಳನ್ನಿಟ್ಟುಕೊಂಡು ಡಿಸೆಂಬರ್ 3 ರಂದು ಬೆಂಗಳೂರಿನ ಕಾರ್ಮಿಕ ಇಲಾಖೆ ಆಯುಕ್ತರ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

Related posts

Leave a Reply