Header Ads
Breaking News

ಡಿ. 31 ಮತ್ತು ಜ.1 ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ದೈವ ಶ್ರೀ ಮುಂಡಾಲತ್ತಾಯ ದೈವದ ಮೂಲಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ

ಇತಿಹಾಸ ಪ್ರಸಿದ್ಧ ವಿಟ್ಲ ಅರಮನೆಯ ಆಡಳಿತಕ್ಕೊಳಪಟ್ಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ದೈವ ಶ್ರೀ ಮುಂಡಾಲತ್ತಾಯ ದೈವದ ಮೂಲಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಡಿ. 31 ಮತ್ತು ಜ.1 ರಂದು ನಡೆಯಲಿದೆ.

ವಿಟ್ಲ ಶ್ರೀ ಪಂಚಲಿಂಗೇಶ್ವರ ಸಾನಿಧ್ಯದ ಸಮೀಪ ದೇವಸ್ಯ ಬೈಲಿನಲ್ಲಿ ದೈವಸ್ಥಾನದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಆಲಂಪಾಡಿ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಡಿ 31 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ದೈವದ ಭಂಡಾರವನ್ನು ಮೂಲಸ್ಥಾನಕ್ಕೆ ತೆಗೆದುಕೊಂಡು ಹೋಗುವ ದೈವಿ ಕಾರ್ಯ ನಡೆಯಲಿದೆ. ಜ.1ರಂದು ಬೆಳಿಗ್ಗೆ 10 ಗಂಟೆಗೆ ಮುಂಡಾಲತ್ತಾಯ ದೈವದ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಮಧ್ಯಾಹ್ನ ಶ್ರೀ ದೈವದ ನೇಮೋತ್ಸವ ನೆರವೇರಲಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯದ ಪ್ರಧಾನ ದೈವ ಆಗಿರುವ ಮುಂಡಾಲತ್ತಾಯ ದೈವದ ಮೂಲಸ್ಥಾನ ಶತಮಾನಗಳಿಂದ ಸಂಪೂರ್ಣವಾಗಿ ನಶಿಸಿ ಹೋಗಿ ಅಜೀರ್ಣಾವಸ್ಥೆಯಲ್ಲಿತ್ತು.ವರ್ಷಗಳ ಹಿಂದೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೈವಸ್ಥಾನದ ಮೂಲಸ್ಥಾನದಲ್ಲಿಯೇ ನೂತನವಾದ ದೈವದ ಗುಡಿಯನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ಈ ದೈವದ ಜೀರ್ಣೋದ್ಧಾರ ಮಾಡುವಲ್ಲಿ ವಿಟ್ಲದ ಸಮಸ್ತ ಭಕ್ತರೆಲ್ಲರೂ ಕೈ ಜೋಡಿಸಿದ್ದು, ಕೇವಲ 48 ದಿನಗಳಲ್ಲಿ ದೈವಸ್ಥಾನದ ನಿರ್ಮಾಣ ದ ಸಂಕಲ್ಪ ನೆರವೇರಿದೆ.
ವಿಟ್ಲ ಜಾತ್ರೋತ್ಸವ ಧ್ವಜಾರೋಹಣ ದಿನದಂದು ಸಂಜೆ ಮೂಲಸ್ಥಾನದಿಂದ ದೈವದ ಭಂಡಾರವು ದೇವಸ್ಥಾನಕ್ಕೆ ಆಗಮಿಸುತ್ತದೆ. ಜಾತ್ರಾ ಸಂದರ್ಭದಲ್ಲಿ ಮಹಾರಥೋತ್ಸವ ಮತ್ತು ಅವಭೃತ ಸ್ನಾನದಂದು ದೇವರೊಂದಿಗೆ ದೈವದ ಸವಾರಿ ನಡೆಯುತ್ತದೆ.
ಧ್ವಜಾವರೋಹಣ ಗೊಂಡು ಮೊದಲ ನೇಮೋತ್ಸವ ದೇವರ ಸಾನಿಧ್ಯದಲ್ಲಿ ನಡೆದು ದೈವದ ಭಂಡಾರವು ಮೂಲಸ್ಥಾನವನ್ನು ತಲುಪುತ್ತದೆ. ಪ್ರಶ್ನಾಚಿಂತನೆಯ ನಂತರ ಈ ದೈವದ ಕಾರ್ಯಕ್ರಮಗಳು ಲಾಕ್ ಡೌನ್ ಕಾರಣದಿಂದ ಮುಂದೂಡಲ್ಪಟ್ಟಿದ್ದು, ನ.13 ರಂದು ಆರಂಭಗೊಂಡು 48 ದಿನಗಳ ಅವಧಿಯಲ್ಲಿ ಪೂರ್ಣಗೊಂಡು ದೈವಕ್ಕೆ ಸಮರ್ಪಣೆಯಾಗಲಿದೆ.

ಸತೀಶ್ ಕುಮಾರ್ ಆಳ್ವಾ –ಗೌರವಾಧ್ಯಕ್ಷರು

          ಕೃಷ್ಣಯ್ಯ ಕೆ.-ಗೌರವಾಧ್ಯಕ್ಷರು

ಬಾಬು ಕೆ.ವಿ – ಕಾರ್ಯಧ್ಯಕ್ಷರು

ಹೆಚ್.ಜಗನ್ನಾಥ್ ಸಾಲ್ಯಾನ್ – ಗೌರವಾಧ್ಯಕ್ಷರು

ಕೀರ್ತನ್ ಕೆದಿಲಾಯ ಗುರುಂಪು – ಅಧ್ಯಕ್ಷರು

 

 

 

 

Related posts

Leave a Reply

Your email address will not be published. Required fields are marked *