Header Ads
Header Ads
Breaking News

ಡಿ.31: ಹೊಟೇಲ್ ಮೋತಿ ಮಹಲ್‍ನಲ್ಲಿ ‘ನ್ಯೂ ಇಯರ್ ಗಾಲಾ’

ಮಂಗಳೂರು: ಹೊಸ ವರ್ಷ ಎಲ್ಲರಿಗೂ ವಿಶೇಷ. ಇದು ಹೊಸ ಭರವಸೆ ಮತ್ತು ಹೊಸ ಪ್ರಾರಂಭದ ದೊಡ್ಡ ಸಂಕೇತವಾಗಿದೆ. ಹೌದು, ಮಂಗಳೂರು ಜನತೆ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಎಲ್ಲಾ ಸಿದ್ದತಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಂತೆಯೇ ನಗರದ ಹೃದಯ ಭಾಗದಲ್ಲಿರುವ ಹೊಟೇಲ್ ಮೋತಿ ಮಹಲ್ ಹೊಸ ವರ್ಷದ ಅಂಗವಾಗಿ ನ್ಯೂ ಇಯರ್ ಗಾಲಾ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಹೌದು ಇದೀಗಾಗಲೇ ತನ್ನ ನಗುಮೊಗದ ಸೇವೆಯನ್ನು ನಗರದ ಜನತೆಗೆ ನೀಡುತ್ತಿರುವ ಹೊಟೇಲ್ ಮೋತಿ ಮಹಲ್ ಡಿಸೆಂಬರ್ 31 ರಂದು ಮೋತಿಮಹಲ್‍ನ ಪೂಲ್ ಸೈಡ್‍ನಲ್ಲಿ ನ್ಯೂ ಇಯರ್ ಗಾಲಾವನ್ನು ಆಯೋಜಿಸುತ್ತಿದೆ ಎಂದು ಮೋತಿ ಮಹಲ್‍ನ ಸೇಲ್ಸ್ ಮ್ಯಾನೇಜರ್ ಕ್ಲೌಡಿ ಲೋಬೋ ತಿಳಿಸಿದರು.

ಈ ಕುರಿತು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ಮಂಗಳೂರಿನ ನಂಬರ್ 1 ಬ್ಯಾಂಡ್ ಸೆಟ್ ಆದ ಚರಿತ್ರ ಬ್ಯಾಂಡ್‍ರವರಿಂದ ಲೈವ್ ಬ್ಯಾಂಡ್, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಡಾನ್ಸ್ ಹಾಗೂ ಗೇಮ್ಸ್‍ಗಳನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಮೋತಿ ಕ್ವೀನ್ ಮೋತಿ ಕಿಂಗ್ ಹಾಗೂ ಬೆಸ್ಟ್ ಕಪಲ್ ಆಫ್ ದ ಡೇ ಎಂಬ ಆಯ್ಕೆಯನ್ನು ಮಾಡಲಿದ್ದೇವೆ. ಜೊತೆಗೆ ಮಂಗಳೂರು ಟು ದುಬೈ, ದುಬೈ ಟು ಮಂಗಳೂರಿನ ಏರ್ ಟಿಕೆಟ್, ಚಿನ್ನದ ಸರ, ಎಲ್‍ಇಡಿ ಟಿವಿ, ರಿಫ್ರಿಜರೇಟರ್ ಹಾಗೂ ಆಕರ್ಷಕ ಉಡುಗೊರೆಗಳನ್ನು ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದ ನಿರ್ವಹಣೆಯನ್ನು ರೋಷಲ್ ಫೆರ್ನಾಂಡಿಸ್ ಅವರು ಮಾಡಲಿದ್ದು ಕಾರ್ಯಕ್ರಮಕ್ಕೆ ಡಿಜೆ ಮ್ಯೂಸಿಕ್ ಅನ್ನು ಡಿಜೆ ಸುಷ್ ಅವರು ನುಡಿಸಲಿರುವರು ಎಂದು ಹೇಳಿದರು.

Related posts

Leave a Reply