Header Ads
Header Ads
Breaking News

ಡಿ. 4ರಂದು ಮಣ್ಣಗುಡ್ಡೆ ಗುರ್ಜಿ:ಕಾರ್ಯದರ್ಶಿ ಪಿ.ಭಾರ್ಗವ ತಂತ್ರಿಯವರಿಂದ ಮಾಹಿತಿ

ಶರವು ಶ್ರೀ ಮಹಾಗಣಪತಿ ದೇವರ 149ನೇ ವರ್ಷದ ದೀಪಾರಾಧನೆ ಉತ್ಸವವು ಡಿಸೆಂಬರ್ 4ರಂದು ರಾತ್ರಿ ಮಣ್ಣಗುಡ್ಡೆಯಲ್ಲಿ ಬಹಳ ವಿಜೃಂಭಣೆಯಿಂ ನಡೆಯಲಿದೆ ಎಂದು ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿಯ ಕಾರ್ಯದರ್ಶಿ ಪಿ.ಭಾರ್ಗವ  ತಂತ್ರಿಯವರು ತಿಳಿಸಿದರು.

ಅವರು ಮಂಗಳೂರಿನ ಪತ್ರಿಕಾಭವನದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಂದು ಸಂಜೆ ಡಾ ಆರ್ ರತಿದೇವಿಯವರು ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದು, ಡಾ ಆರೂರು ಪ್ರಸಾದ್ ರಾವ್‌ರವರು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ ಎಂದರು. ಇನ್ನು ವುಡ್‌ಲ್ಯಾಂಡ್ಸ್ ಹೊಟೇಲ್‌ನ ಮಾಲಕ ವೈ ರಮೇಶ್ ಭಟ್‌ರವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ವೈ ರಮೇಶ್ ಭಟ್, ಕಾರ್ಯಾಧ್ಯಕ್ಷ ಬಿ ವಾಸುದೇವ ದಾಸ್ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply