Header Ads
Header Ads
Breaking News

ಡಿ 6ರಿಂದ 9ರ ವರೆಗೆ ಪುತ್ತೂರಿನಲ್ಲಿ ರಾಜ್ಯ ಶಾರ್ಟ್ ಕೋರ್ಸ್ ಅಕ್ವೆಟಿಕ್ ಚಾಂಪಿಯನ್‍ಶಿಪ್

ಪುತ್ತೂರು: ಕರ್ನಾಟಕ ಈಜು ಅಸೋಸಿಯೇಶನ್, ಪುತ್ತೂರು ಅಕ್ವೆಟಿಕ್ ಕ್ಲಬ್ ಆಶ್ರಯದಲ್ಲಿ ಡಿ. 6ರಿಂದ 9ರವರೆಗೆ ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಕರ್ನಾಟಕ ರಾಜ್ಯ ಶಾರ್ಟ್ ಕೋರ್ಸ್ ಅಕ್ವೆಟಿಕ್ ಚಾಂಪಿಯನ್‍ಶಿಪ್ ನಡೆಯಲಿದೆ ಎಂದು ಪುತ್ತೂರು ಸಹಾಯಕ ಕಮಿಷನರ್ ಮತ್ತು ಬಾಲವನ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಎಚ್. ಕೆ. ಕೃಷ್ಣಮೂರ್ತಿ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಕರ್ನಾಟಕ ಈಜು ಅಸೋಸಿಯೇಶನ್ 2 ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಇದರಲ್ಲಿ ಶಾರ್ಟ್ ಕೋರ್ಸ್ ಸ್ಪರ್ಧೆಯ ಅವಕಾಶ ಈ ಬಾರಿ ದ.ಕ. ಜಿಲ್ಲೆಯ ಪುತ್ತೂರಿಗೆ ಲಭಿಸಿದೆ. ಇಷ್ಟು ದೊಡ್ಡ ಸ್ಪರ್ಧೆ ಇದೇ ಮೊದಲ ಬಾರಿಗೆ ತಾಲೂಕು ಕೇಂದ್ರದಲ್ಲಿ ನಡೆಯುತ್ತಿದೆ ಎಂದರು.

ಡಿ. 6ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಹಾಯಕ ಕಮಿಷನರ್ ಎಚ್. ಕೆ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೆಎಸ್‍ಎ ಅಧ್ಯಕ್ಷ ಗೋಪಾಲ್ ಬಿ. ಹೊಸೂರು, ಕೆಎಸ್‍ಎ ಚೇರ್‍ಮೆನ್ ನೀಲ್‍ಕಾಂತ್ ರಾವ್ ಜಗದಾಲೆ, ಕಾರ್ಯದರ್ಶಿ ಸತೀಶ್ ಕುಮಾರ್ ಎಂ., ಬಾಲವನ ಈಜುಕೊಳ ಸಮಿತಿ ಅಧ್ಯಕ್ಷ ಹಾಗೂ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನಾಲ್ಕು ದಿನಗಳು ಬೆಳಗ್ಗೆ 8.30ರಿಂದ ಮಧ್ಯಾಹ್ನ 2ಗಂಟೆವರೆಗೆ ಪ್ರಥಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಐದು ವಿಭಾಗಗಳಿಂದ ಅತ್ಯುತ್ತಮ ಪ್ರದರ್ಶನ ನೀಡಿದ 8 ಮಂದಿ ಸಂಜೆ 5.30ರಿಂದ 7.30ರವರೆಗೆ ಹೊನಲು ಬೆಳಕಿನಲ್ಲಿ ನಡೆಯುವ ಫೈನಲ್‍ನಲ್ಲಿ ಸ್ಪರ್ಧಿಸಲಿದ್ದಾರೆ. ಐದು ವಿಭಾಗದಲ್ಲಿ 140 ಸ್ಪರ್ಧೆಗಳಿವೆ. ಪ್ರತಿ ವಿಭಾಗದ ಅಂತಿಮ ಆಯ್ಕೆಯ ಸ್ಪರ್ಧೆಗಳು ದಕ್ಷಿಣ ವಲಯ ಅಕ್ವೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದರು.

ಸಬ್‍ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 25 ಮೀ. ಈಜುಕೊಳದಲ್ಲಿ ಇದೇ ಮೊದಲ ಬಾರಿಗೆ ಸೀನಿಯರ್ ಶಾರ್ಟ್ ಕೋರ್ಸ್ ನಡೆಯುತ್ತಿದೆ. ಒಟ್ಟು ಐದು ವಿಭಾಗದಲ್ಲಿ 140 ಸ್ಪರ್ಧೆಗಳು ನಡೆಯಲಿವೆ. 800ಕ್ಕೂ ಅ„ಕ ಸ್ಪರ್„ಗಳು ಭಾಗವಹಿಸಲಿದ್ದಾರೆ. ಸಬ್ ಜೂನಿಯರ್ 2 ವಿಭಾಗದಲ್ಲಿ (9ರಿಂದ 10 ವರ್ಷ ಹಾಗೂ 11ರಿಂದ 12 ವರ್ಷ), ಜೂನಿಯರ್ 2 ವಿಭಾಗ (13ರಿಂದ 14 ವರ್ಷ ಹಾಗೂ 15ರಿಂದ 17 ವರ್ಷ), ಸೀನಿಯರ್ (18 ವರ್ಷ ಮೇಲ್ಪಟ್ಟ) ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಜೀವನದಲ್ಲಿ ಈಜು ಕೌಶಲ್ಯದ ಪ್ರಾಮುಖ್ಯತೆಯನ್ನು ಸಾರುವ ಸಂದೇಶವನ್ನು ಜನರಲ್ಲಿ ಮೂಡಿಸುವ ಜವಾಬ್ದಾರಿಯಿಂದ ಈ ಚಾಂಪಿಯನ್‍ಶಿಪನ್ನು ಆಯೋಜಿಸಲಾಗುತ್ತಿದೆ. ಸ್ವರಕ್ಷಣೆಯ ನಿಟ್ಟಿನಲ್ಲಿ ಈಜು ಕಲಿಕೆಯ ಪ್ರೇರೇಪಣೆ ಅಗತ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಜು ಕಲಿಕೆಯ ಆಸಕ್ತಿ, ಅನಿವಾರ್ಯತೆಯನ್ನು ಅರಿತುಕೊಳ್ಳಲು ಈ ಚಾಂಪಿಯನ್‍ಶಿಪ್ ಸೂರ್ತಿ ತುಂಬಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಾಲವನ ಈಜುಕೊಳ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಪುತ್ತೂರು ಅಕ್ವೆಟಿಕ್ ಕ್ಲಬ್ ಅಧ್ಯಕ್ಷೆ ಪ್ರತಿಮಾ ಹೆಗ್ಡೆ, ತರಬೇತುದಾರರಾದ ಪಾರ್ಥ ವಾರಣಾಶಿ, ನಿರೂಪ್ ಜಿ. ಆರ್., ಉಪಸ್ಥಿತರಿದ್ದರು.

Related posts

Leave a Reply