Header Ads
Header Ads
Breaking News

ಡಿ.7ರಂದು ಕುಂಜತ್ತೂರು ಪ್ರವಾಸಿ ಪೋರಂನಿಂದ ನಿರ್ಮಿಸಲಾದ ಮದ್ರಸ ಕಟ್ಟಡ ಉದ್ಘಾಟನೆ

ಮಂಜೇಶ್ವರ: ಕುಂಜತ್ತೂರು ಜಮಾಹತ್ ಸಮಿತಿಯ ನೇತೃತ್ವದಲ್ಲಿ ಕಾರ್ಯಾಚರಿಸಿಕೊಂಡಿರುವ ಮಹ್ ದನುಲ್ ಉಲೂಂ ಮದ್ರಸಕ್ಕೆ ಕುಂಜತ್ತೂರು ಪ್ರವಾಸಿ ಫೋರಂ ವತಿಯಿಂದ ನೂತನವಾಗಿ ನಿರ್ಮಿಸಿ ಕೊಟ್ಟ ಕಟ್ಟಡದ ಉದ್ಘಾಟನೆಗೆ ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಟ್ಟಡ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಅಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಘಲ್ ನೆರವೇರಿಸಲಿದ್ದಾರೆ. ಬಳಿಕ ಜಮಾಹತ್ ಅಧ್ಯಕ್ಷ ಡಾಕ್ಟರ್ ಕೆ ಎ ಖಾದರ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಕುಂಜತ್ತೂರು ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಆಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.ಈ ಸಂದರ್ಭ ಕುಂಜತ್ತೂರು ಖತೀಬ್ ಕೆ ಹಾಶಿರ್ ಅಲ್ ಹಾಮಿದಿ, ಮೊಯ್ದೀನ್ ಕುಂಞಿ ಹಾಜಿ ಪ್ರಿಯಾ, ಇಬ್ರಾಹಿಂ ಹಾಜಿ ಕೆ ಎ, ಸಯ್ಯದ್ ಎಂ ಕೆ. ಎ ಆರ್ ಅಬ್ದುಲ್ ರಹ್ಮಾನ್ ಹಾಜಿ, ಕೆ ಕೆ ಮೊಹಮ್ಮದ್ ಫೈಝಿ, ತೌಸೀಫ್ ಆಹ್ಮದ್ ಹನೀಫಿ ಮೊದಲಾದವರು ಉಪಸ್ಥರಿರುವರು. ಬಳಿಕ ಮಗ್ರಿಬ್ ನಮಾಜಿನ ನಂತ್ರ ಅಬೂಬಕ್ಕರ್ ಸಿದ್ದೀಖ್ ಅಝ್ ಹರಿ ಪಯ್ಯನ್ನೂರು ಇವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ. ಬಳಿಕ ಶನಿವಾರ ಸಮಾರೋಪ ಸಮಾರಂಭ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆ ನಡೆಯಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

Related posts

Leave a Reply