Header Ads
Header Ads
Breaking News

ಡಿ.7ರಂದು ಸಾಸ್ತಾನ ಟೋಲ್‌ಗೇಟ್ ವಿರುದ್ಧ ಹೋರಾಟ:ಹೆಜಮಾಡಿ ಟೋಲ್ ಹೋರಾಟಗಾರರ ಬೆಂಬಲ

ಹೋರಾಟಗಾರರು ವಿಭಜನೆಗೊಳ್ಳದೆ ಒಂದಾಗಿ ಹೋರಾಟ ನಡೆಸಿದಾಗ ಹೋರಾಟಕ್ಕೆ ಬಲ ತುಂಬಿ ನಮ್ಮ ಜನಪರ ಬೇಡಿಕೆಗಳು ಈಡೇರಲು ಸಾಧ್ಯ, ಆ ನಿಟ್ಟಿನಲ್ಲಿ ಡಿಸೆಂಬರ್ 7ರಂದ್ದು ಸಾಸ್ತಾನ ಟೋಲ್ ಹೋರಾಟ ಸಮಿತಿ ಕರೆ ನೀಡಿದ ಬಂದ್‌ಗೆ ಹೆಜಮಾಡಿ ಟೋಲ್ ಹೋರಾಟ ಸಮಿತಿಯೂ ಸಂಪೂರ್ಣ ಬೆಂಬಲ ನೀಡಲಿದ್ದು, ನಾವು ಸಾವಿರಾರು ಮಂದಿ ಆ ಹೋರಾಟದಲ್ಲಿ ಭಾಗವಹಿಸುವುದಾಗಿ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಪಡುಬಿದ್ರಿ ಬಿಲ್ಲವ ಸಂಘದಲ್ಲಿ ನಡೆದ ಹೋರಾಟ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಈ ಹೋರಾಟ ಸಾರ್ವಜನಿಕ ಹಿತಾಸಕ್ತಿಗಾಗಿ ಹಮ್ಮಿಕೊಳ್ಳಲಾಗಿದ್ದು ಆ ನಿಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ವಾಹನದಲ್ಲಿ ಸಾಸ್ತಾನ ಟೋಲ್‌ಗೇಟ್ ಬಳಿ ಸೇರುವ ಮೂಲಕ ಹೋರಾಟವನ್ನು ಯಶಸ್ಸುಗೊಳಿಸುವಂತೆ ವಿನಂತಿಸಿದ್ದಾರೆ.

ಒಂದು ಕಡೆಯಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎನ್ನುತ್ತಾರೆ, ಮತ್ತೊಂದು ಕಡೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳುವಂತೆ ನನಗೆ ಹೋರಾಟ ಸಮಿತಿಯ ಸಭೆಗೆ ಹೇಳಿಕೆಯೇ ಇಲ್ಲ ಎನ್ನುತ್ತಾರೆ. ಒಂದು ಕಡೆಯಲ್ಲಿ ಪಕ್ಷತೀತವಾಗಿ ಎಲ್ಲರನ್ನೂ ಸೇರಿಸಿಕೊಂಡು ಹೋರಾಟ ನಡೆಸುತ್ತೇವೆ ಎನ್ನುತ್ತಾರೆ, ಮತ್ತೊಂದು ಕಡೆಯಲ್ಲಿ ಪ್ರಮುಖರನ್ನೇ ಕಡೆಗಣಿಸುತ್ತಿದ್ದಾರೆ ಎಂಬ ಮಾತುಗಳು ಕೂಡ ಸಭೆಯಲ್ಲಿ ಕೇಳಿ ಬಂದಿದೆ.

ಕಳೆದ ಹೋರಾಟ ಸಮಿತಿ ಸಭೆಗೆ ಮುನ್ನೂರಷ್ಟು ಜನ ಸೇರಿದ್ದರೆ ಇಂದಿನ ಸಭೆಗೆ ಕೇವಲ ಐವತ್ತರಷ್ಟು ಜನ ಸೇರುವ ಮೂಲಕ, ಹೋರಾಟ ಸಮಿತಿಯ ಸಭೆಯಲ್ಲಿ ನಿರ್ಧಾರವಾಗುವ ಯಾವುದೇ ನಿರ್ಣಯಗಳು ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಂಬುದು ಇಲ್ಲಿ ಸಾಭೀತಾಗುತ್ತಿದೆ. ಮೂನ್ನೂರು ಜನ ಸೇರಿದ ಸಭೆಯಲ್ಲಿ ಹೆಜಮಾಡಿ ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಬಗ್ಗೆ ನಿರ್ಣಯಿಸಲಾಯಿತಾದರೂ, ಪೊಲೀಸ್ ಅಧಿಕಾರಿಯೋರ್ವರ ನಿರ್ಧೇಶನದಂತೆ ಹೋರಾಟದ ರೂಪುರೇಷೆ ಬದಲಾಗಿದ್ದರೂ, ಆ ಪ್ರತಿಭಟನೆಗೆ ಸೇರಿದ್ದು ಸರಿ ಸುಮಾರು ಐದು ನೂರು ಮಂದಿ, ಇದೀಗ ೫೦ ಮಂದಿಯ ಸಭೆಯಲ್ಲಿ ನಿರ್ಧರಿಸಿದಂತೆ ಸಾವಿರಾರು ಮಂದಿ ಸಾಸ್ತಾನ ಹೋರಾಟಕ್ಕೆ ಬೆಂಬಲ ನೀಡಲು ತಮ್ಮ ತಮ್ಮ ವಾಹನಗಳಲ್ಲಿ ತೆರಳಲು ಮನ ಮಾಡಿಯಾರೇ.. ಕಾಲವೇ ನಿರ್ಧರಿಸ ಬೇಕು ಎಂಬುದು ಸಭೆಯಲ್ಲೇ ಕೇಳಿ ಬಂದ ಮಾತು.

Related posts

Leave a Reply