Header Ads
Breaking News

ಡೆಂಗ್ಯು, ಪ್ಲೇಗ್ ಮಹಾಮಾರಿಗೆ ಯುವಕ ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂ ಮತ್ತೊಂದು ಬಲಿ ಪಡೆದಿದೆ.. ಶಂಕಿತ ಡೆಂಗ್ಯೂ ಹಾಗೂ ಪ್ಲೇಗ್ ಜ್ವರದಿಂದ ಬಳಲುತ್ತಿದ್ದ ತೊಕ್ಕೊಟ್ಟು ಭಟ್ನಗರ ನಿವಾಸಿ ಹರ್ಷಿತ್ ಗಟ್ಟಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುತಿದ್ದ ಹರ್ಷಿತ್ ಅವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಸ್ಥಳಿಯ ವೈದ್ಯರಿಂದ ಔಷಧಿ ತೆಗೆದುಕೊಂಡಿದ್ದರು. ಜ್ವರ ಉಲ್ಬಣಿಸಿದ ಬಳಿ ತೊಕ್ಕೋಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹರ್ಷಿತ್‌ಗೆ ಇಲಿ ಜ್ವರದೊಂದಿಗೆ ಶಂಕಿತ ಡೆಂಗ್ಯೂ ಜ್ವರ ಬಾಧಿಸಿತ್ತು ಅಂತ ಕುಟುಂಬದ ಮೂಲಗಳು ತಿಳಿಸಿವೆ.

Related posts

Leave a Reply

Your email address will not be published. Required fields are marked *