Header Ads
Header Ads
Breaking News

ಡೆಂಗ್ಯೂ ಜ್ವರದ ಬಗ್ಗೆ ಮನೆ ಮನೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ : ಎಚ್.ಕೆ.ಕೃಷ್ಣಮೂರ್ತಿ ಸೂಚನೆ

ಪುತ್ತೂರು: ಜಿಲ್ಲೆಯಲ್ಲಿ ಮಾರಕವಾಗಿರುವ ಸಾಂಕ್ರಾಮಿಕ ರೋಗ ಬಾಧೆ ಅತಿಯಾಗಿದ್ದು, ತಾಲೂಕಿನಲ್ಲಿ ಇದರ ತಡೆಗಾಗಿ ಸಮರೋಪಾದಿಯಾಗಿ ಕೆಲಸ ನಿರ್ವಹಿಸಬೇಕಾಗಿದೆ. ಪುತ್ತೂರು ಕಡಬ ಸೇರಿದಂತೆ ತಾಲೂಕಿನಲ್ಲಿ 95 ಡೆಂಗ್ಯು ಪ್ರಕರಣಗಳು ದಾಖಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮನೆ ಮನೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ತಿಳಿಸಿದರು.
ಅವರು ಉಪವಿಭಾಗಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ಡೆಂಗ್ಯೂ ಜ್ವರದ ಪರಿಸ್ಥಿತಿಯ ಅಧ್ಯಯನ ಮತ್ತು ನಿಯಂತ್ರಣ ಕ್ರಮಗಳ ಕುರಿತು ಆರೋಗ್ಯ ಇಲಾಖೆ, ಗ್ರಾಮ ಪಂಚಾಯತಿ ಮತ್ತು ನಗರಸಭೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಆಶಾಜ್ಯೋತಿ ಪುತ್ತೂರಾಯ ಮಾತನಾಡಿ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 10 ಶಂಕಿತ ಡೆಂಗ್ಯು ರೋಗಿಗಳು ದಾಖಲಾಗಿದ್ದಾರೆ, ಆದರೆ ಡೆಂಗ್ಯು ಎಂದು ದೃಢೀಕರಣವಾಗಿಲ್ಲ ಎಂದು ತಿಳಿಸಿದರು. ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಪಂ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯೇಂದ್ರ ಸಾಲಿಯಾನ್, ಪುತ್ತೂರು ತಹಶೀಲ್ದಾರ್ ಅನಂತ ಶಂಕರ, ಸಹಾಯಕ ಕಮಿಷನರ್ ಕಚೇರಿ ವ್ಯವಸ್ಥಾಪಕ ಬಾಬು ನಾಯ್ಕ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *