Header Ads
Breaking News

ಡೈರಿಯಲ್ಲಿ ತಮ್ಮ-ಯಡಿಯೂರಪ್ಪರ ಹೆಸರು ಪ್ರಸ್ತಾಪರ ಆರೋಪ: ಶೋಭಾ ಕರಂದ್ಲಾಜೆ ಹೇಳಿದ್ದೇನು?

ಯಡಿಯೂರಪ್ಪ ಅವರದ್ದೆಂದು ಹೇಳಲಾಗ್ತಾ ಇರುವ ಡೈರಿಯನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಹತಾಶ ರಾಜಕಾರಣಕ್ಕೆ ಇಳಿದಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಉಡುಪಿಯಲ್ಲಿ ಕಾಂಗ್ರೆಸ್ ವಕ್ತಾರರು ಬಿಡುಗಡೆ ಮಾಡಿರುವ ಡೈರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅತ್ಯಂತ ಕೀಳುಮಟ್ಟದ ರಾಜಕಾರಣವನ್ನು ಕಾಂಗ್ರೆಸ್ ಮಾಡಿದೆ. ಯಡಿಯೂರಪ್ಪ ಅವರಿಗೆ ಡೈರಿ ಬರೆಯುವ ಹವ್ಯಾಸ ಇದೆಯಾ ಎನ್ನುವುದನ್ನು ಕೇಳಬೇಕು. ಯಾರದೋ ಮಕ್ಕಳಿಂದ ಡೈರಿಯನ್ನು ಬರೆಸಿ ಅದನ್ನು ಯಡಿಯೂರಪ್ಪನವರದ್ದು ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳುವ ನೈತಿಕತೆಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಅದಕ್ಕಾಗಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಇನ್ನು ಡೈರಿಯಲ್ಲಿ ತಮ್ಮ ಹಾಗೂ ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪವಾಗಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ವೈಯಕ್ತಿಕ ಚಾರಿತ್ರ್ಯವಧೆ ಮಾಡುವುದು ಸರಿಯಲ್ಲ. ನಾನು ಬಿಜೆಪಿಯಲ್ಲಿ ಹೋರಾಟ ಮಾಡುತ್ತಿದ್ದೇನೆ. ಧ್ವನಿ ಎತ್ತುತ್ತಿದ್ದೇನೆ. ನನ್ನ ಧ್ವನಿಯನ್ನು ಉಡುಗಿಸಬೇಕು ಎನ್ನುವ ಏಕೈಕ ಕಾರಣಕ್ಕೆ ಈರೀತಿ ಮಾಡುತ್ತಿದ್ದಾರೆ ಎಂದು ಶೋಭಾ ಆರೋಪಿಸಿದರು.

Related posts

Leave a Reply

Your email address will not be published. Required fields are marked *