Header Ads
Header Ads
Breaking News

ಉಡುಪಿ: “ಡ್ರಗ್ಸ್” ವಿರುದ್ದ ಬೀದಿಗಿಳಿದ ವಿದ್ಯಾರ್ಥಿಗಳು

ಉಡುಪಿಯಲ್ಲಿ ಇಂದು ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದರು. ಈ ಹೋರಾಟಕ್ಕೆ ಪೊಲೀಸರು, ಪತ್ರಕರ್ತರೂ ಸಾಥ್ ನೀಡಿದರು ಇಂದು ಉಡುಪಿಯಲ್ಲಿ ವಿದ್ಯಾರ್ಥಿಗಳದ್ದೇ ಸದ್ದು ಗದ್ದಲ. ರಸ್ತೆಗೆ ಇಳಿದ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾರೀ ಹೋರಾಟವನ್ನೇ ಆಯೋಜಿಸಿದರು.ಇದರಲ್ಲಿ ಪತ್ರಕರ್ತರೂ , ದೊಡ್ಡ ಸಂಖ್ಯೆಯಲ್ಲಿ ಪೊಲೀಸರೂ ಸಾಥ್ ನೀಡಿದರು. ಈ ಹೋರಾಟ ನಡೆದದದ್ದು ಮಾದಕ ವ್ಯಸನದ ವಿರುದ್ದ.ಉಡುಪಿ ಜಿಲ್ಲಾ ಪೊಲೀಸ್ , ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ದ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಇಂದು ಕಾಲ್ನಡಿಗೆ ಜಾಥಾ ನಡೆಯಿತು. ಎಂಜಿಎಂ ಕಾಲೇಜಿನ ಎದುರು ಮಾದಕ ವ್ಯಸನದದ ವಿರುದ್ದದ ಕಾಲ್ನಡಿಗೆ ಜಾಥಾಕ್ಕೆ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.


ಕಾಲ್ನಡಿಗೆ ಜಾಥಾದಲ್ಲಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಮತ್ತವರ ತಂಡ ಅಣಕು ಪ್ರದರ್ಶನ ನಡೆಸಿದ್ದು ಗಮನಸೆಳೆಯಿತು. ನಿತ್ಯಾನಂದ ಒಳಕಾಡು, ಅಶ್ವಿನಿ ದೇವಾಡಿಗ ಇವರು ಮಾಧಕ ವ್ಯಸನದಿಂದಾಗುವ ಪರಿಣಾಮದ ಬಗ್ಗೆ ವಿಶಿಷ್ಟ ರೀತಿಯ ವೇಷದಲ್ಲಿ ಗಮನಸೆಳೆದರು.ಕಾಲ್ನಡಿಗೆ ಜಾಥಾ ಎಂಜಿಎಂ ಕಾಲೇಜಿನಿಂದ ಆರಂಭವಾಗಿ ಅಜ್ಜರಕಾಡು ಮೈದಾನದಲ್ಲಿ ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಡ್ರಗ್ಸ್ ನ ಕೇಸುಗಳು ಇಡೀ ರಾಜ್ಯದಲ್ಲಿ ನೋಡುವುದಾದರೆ ಉಡುಪಿಯಲ್ಲಿಯೇ ಜಾಸ್ತಿ. ಅಮೇರಿಕಾದಲ್ಲಿ ವಿಶ್ವದಲ್ಲೇ ಅಧಿಕ ಡ್ರಗ್ಸ್ ಮಾರಾಟವಾಗುತ್ತದೆ.ಆದ್ರೆ ಎಷ್ಟು ನಿಯಂತ್ರಣ ಮಾಡಲು ಹೊರಟರೂ ಅದು ಸಾದ್ಯವಾಗಿಲ್ಲ. ಯುವಜನತೆ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಎಂಬುದರ ಬಗ್ಗೆ ಪ್ರಮಾಣ ಮಾಡಬೇಕು.ಮತ್ತು ಇತರರಿಗೂ ದುಷ್ಪರಿಣಾಮದ ಬಗ್ಗೆ ತಿಳಿಸಬೇಕು.ಆಗ ಮಾತ್ರ ಡ್ರಗ್ಸ್ ವಿರುದ್ದದ ಹೋರಾಟದಲ್ಲಿ ಜಯಗೊಳಿಸಲು ಸಾಧ್ಯ.ಆದ್ದರಿಂದ ಡ್ರಗ್ಸ್ ಮುಕ್ತವಾಗಬೇಕಾದರೆ ಅದು ಇಂದಿನ ವಿದ್ಯಾರ್ಥಿಗಳು, ಯುವ ಜನತೆಯಿಂದ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಮೋಹನ್ ಆಳ್ವ, ಎಸ್ಪಿ ಲಕ್ಷ್ಮಣ್ ನಿಂಬರಗಿ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply