Header Ads
Header Ads
Breaking News

ಡ್ರಾಮಾ ಜ್ಯೂನಿಯರ್‍ಸ್‌ನಲ್ಲಿ ಬ್ರಾಹ್ಮಣ ವೃತ್ತಿ ಅವಹೇಳನ ಶೋನಲ್ಲಿ ಕ್ಷಮೆಯಾಚಿಸುವಂತೆ ಬ್ರಾಹ್ಮಣ ಸಮಿತಿ ಆಗ್ರಹ ಕ್ಷಮೆಯಾಚಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಎಚ್ಚರಿಕೆ

 

ಡ್ರಾಮಾ ಜ್ಯೂನಿಯರ್‍ಸ್ ರಿಯಾಲಿಟಿ ಶೋನಲ್ಲಿ ಮಕ್ಕಳ ಮೂಲಕ ಬ್ರಾಹ್ಮಣರನ್ನು, ಬ್ರಾಹ್ಮಣ ವೃತ್ತಿಯನ್ನು ಅವಹೇಳನಕಾರಿ ತೋರಿಸಿರುವ ಹಿನ್ನಲೆಯಲ್ಲಿ ಮುಂದಿನ ವಾರದ ರಿಯಾಲಿಟಿ ಶೋನಲ್ಲೇ ಸಾರ್ವಜನಿಕವಾಗಿ ಆಯೋಜಕರು ಕ್ಷಮೆಯಾಚಿಸಬೇಕು ಎಂದು ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪೇಜಾವರ ಮಠದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್, ಪೇಜಾವರ ಮಠದಿಂದ ಇಂದು ನಡೆದ ಪ್ರತಿಭಟನಾ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಡ್ರಾಮಾ ಜ್ಯೂನಿಯರ್‍ಸ್ ನಲ್ಲಿ ಬ್ರಾಹ್ಮಣರನ್ನು ಬ್ರಾಹ್ಮಣ ವೃತ್ತಿಯ ಅವಹೇಳನ ದುಃಖ ತಂದಿದೆ. ಸಮಾಜದಲ್ಲಿ ಶಾಂತಿ ಸಾಮರಸ್ಯ ಕದಡುವ ಕೆಲಸ ಯಾರೂ ಮಾಡಬಾರದು. ಏನೂ ಅರಿಯದ ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕಾರ್ಯ ನಡೆಯಬಾರದು. ಮುಂದಿನ ದಿನಗಳಲ್ಲಿ ಇಂತಹ ಕಾರ್ಯ ನಡೆಯಬಾರದು. ಮುಂದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

 

 

 

 

ಮಾಜಿ ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಮಾಧ್ಯಮದವರೊಂದಿಗೆ ಮಾತನಾಡಿ,
ಜೀ ಕನ್ನಡ ವಾಹಿನಿಯಲ್ಲಿ ವಿಪ್ರ ಸಮಾಜ ಹಾಗೂ ವೃತ್ತಿಯನ್ನು ಅವಹೇಳನ ಮಾಡುವ ಕೆಲಸ ಡ್ರಾಮಾ ಜ್ಯೂನಿಯರ್‍ಸ್ ನಲ್ಲಿ ನಡೆದಿದೆ. ಇಂದು ನಡೆದ ಪ್ರತಿಭಟನೆ ಸಭೆಯಲ್ಲಿ ನಡೆದ ನಿರ್ಣಯದಂತೆ ಜೀ ಟೀವಿ ವಾಹಿನಿಗೆ ಒಂದು ಅವಕಾಶ ನೀಡುತ್ತಿದ್ದೇವೆ ವಿಪ್ರ ಸಮಾಜ ಹಾಗೂ ಸಮಾಜದವರ ವೃತ್ತಿಯ ಬಗ್ಗೆ ಅವಹೇಳನಕ್ಕೆ ಕ್ಷಮೆ ಯಾಚಿಸಬೇಕು. ಯಾವುದೇ ಧರ್ಮ ಮತ್ತು ಕುಲಕಸುಭಿನ ಕುರಿತು ಅವಹೇಳನ ಮಾಡಬಾರದು ಇನ್ನು ಮುಂದೆ ಅವಹೇಳನ ನಡೆದಲ್ಲಿ ಉಗ್ರ ಪ್ರತಿಭನೆ ನಡೆಯಲಿದೆ ಎಂದು ಎಚ್ಚರಿಸಿದರು.

ಇದೇ ಸಂಧರ್ಭ ಅರ್ಚಕ ವೇದವ್ಯಾಸ ಈತಾಳ್ ಮಾತನಾಡಿ, ನಮ್ಮವರೇ ನಮ್ಮ ಬಗ್ಗೆ ಅವಹೇಳನ ಮಾಡುವುದು ಹೆಚ್ಚು. ಶಿಖೆ ಹಾಗೂ ಯಜ್ಞೋಪವೀತ ಪ್ರತಿಯೊಬ್ಬನ ಕರ್ತವ್ಯ ಉತ್ತರ ಭಾಗದಲ್ಲಿ ಪ್ರತಿಯೊಬ್ಬ ಹಿಂದೂ ಶಿಖೆ ಹಾಗೂ ಯಜ್ಞೋಪ ಹಾಕಲು ಹಿಂಜರೆಯಲ್ಲ. ಇಸ್ಕಾನ್ ನವರೂ ಶಿಖೆ ಹಾಕುತ್ತಾರೆ ಆದರೆ ಡ್ರಾಮಾ ಜ್ಯೂನಿಯರ್‍ಸ್ ನಲ್ಲಿ ಮಕ್ಕಳಿಗೆ ತಲೆಕೂದಲ್ಲಿದ್ದರೂ ತಲೆಗೆ ಟೊಪ್ಪಿ ಟೊಪ್ಪಿಗೊಂದು ರಂದ್ರದ ಮೂಲಕ ಶಿಖೆ ಬಿಡುವ ಮೂಲಕ ವಿಪರೀತ ವೇಷದ ಮೂಲಕ ಅವಹೇಳನ ಮಾಡಿದ್ದಾರೆ. ಆ ವೇಷ ಅಸಹ್ಯ ಮಾಡಿ ಮಕ್ಕಳಿಂದ ಹಣ ಕೊಡದಿದ್ದರೆ ಸಾಯುತ್ತಿ ಎಂಬಂತೆ ಮಕ್ಕಳ ಬಾಯಲ್ಲಿ ಹೇಳಿಸಲಾಗಿದೆ. ಪುರೋಹಿತರೆಂದರೆ ದರೋಡೆಕೋರ ಎಂಬಂತೆ ಹೇಳಿಸಲಾಗಿದೆ. ಇದು ವೃತ್ತಿಯ ಅವಹೇಳನ. ಬ್ರಾಹ್ಮಣರ ಕುಲವೃತ್ತಿ ಅದರಲ್ಲೂ ಪುರೋಹಿತರು ತಿರಸ್ಕೃತರಾಗಿದ್ದಾರೆ, ಪುರೋಹಿತರು ಹುಡುಗಿ ನೋಡಲು ಹೋದಾಗಲೂ ತಿರಸ್ಕಾರ. ಆದ್ದರಿಂದ ಇನ್ನು ಮುಂದೆ ಬ್ರಾಹ್ಮಣ ವೃತ್ತಿಗೆ ಅವಮಾನ ಮಾಡಬಾರದು. ಅಪಹಾಸ್ಯ ವೇಷ ಹಾಕಬಾರದು. ಉದ್ಯೋಗವನ್ನೇ ಹಾಸ್ಯಕ್ಕೆ ಬಳಸಬಾರದು. ಹಾಸ್ಯವಿರಲಿ ಅಪಹಾಸ್ಯ ಬೇಡ ಎಂದರು.

ಪ್ರತಿಭಟನಾ ಸಭೆಯಲ್ಲಿ ನಡೆದ ವಿಚಾರವನ್ನು ನಿರ್ಣಯವನ್ನು ಲಿಖಿತವಾಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜೀ ವಾಹಿನಿಗೆ ನೀಡುವ ಮೂಲಕ ಕ್ಷಮೆಗೆ ಹಾಗೂ ಮುಂದೆಂದು ಇಂತಹ ಅಪಹಾಸ್ಯ, ಅವಹೇಳನಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಸುವ ಪತ್ರ ನೀಡುವುದಾಗಿ ನಿರ್ಧರಿಸಲಾಯಿತು.
ವರದಿ:ಪಲ್ಲವಿ ಸಂತೋಷ್

Related posts

Leave a Reply