Header Ads
Header Ads
Breaking News

ತಂಬಾಕು ಮುಕ್ತ ಮಂಗಳೂರು ವಿಶೇಷ ಕಾರ್ಯಾಚರಣೆ:ನಗರದ ಪಂಪ್‌ವೆಲ್ ಪರಿಸರ ವ್ಯಾಪ್ತಿಯಲ್ಲಿ ದಾಳಿ

ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ನೇತೃತ್ವದ ಅಧಿಕಾರಿಗಳಿಂದ ನೇತೃತ್ವದಲ್ಲಿ ತಂಬಾಕು ಮುಕ್ತ ಮಂಗಳೂರು ವಿಶೇಷ ಕಾರ್ಯಾಚರಣೆಯನ್ನು ನಗರದ ಪಂಪ್‌ವೆಲ್ ಪರಿಸರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯ್ತು.

ಸಾರ್ವಜನಿಕರಿಗೆ ತಂಬಾಕು, ಬೀಡಿ, ಸಿಗರೇಟ್ ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ನಗರ ಪೊಲೀಸ್ ಕಮೀಷನರ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ನೇತೃತ್ವದಲ್ಲಿ ಕಾರ್ಯಾಚರಣೆಯನ್ನ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ನಗರದ ಪಂಪ್‌ವೆಲ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ರು. ತಂಬಾಕು ಮುಕ್ತ ಮಂಗಳೂರು ವಿಶೇಷ ಕಾರ್ಯಾಚರಣೆ ನಡೆಸಲಾಯ್ತು. ಇನ್ನು ಮಾಲ್, ಅಂಗಡಿಗಳಲ್ಲಿ ತೆರಳಿದ ಅಧಿಕಾರಿಗಳು ತಂಬಾಕು, ಬೀಡಿ, ಸಿಗರೇಟ್‌ಗಳನ್ನು ವಶಕ್ಕೆ ಪಡೆದುಕೊಂಡರು, ಉತ್ತೇಜನ ನೀಡುವಂತಹ ರೀತಿಯಲ್ಲಿ ಹಾಗೂ ಆಹಾರ ಪದಾರ್ಥ ಜೊತೆಯಲ್ಲಿ ತಂಬಾಕು, ಸಿಗರೇಟ್ ಹಾಗೂ ಮಾರಾಟ ಮಾಡುವಂತಿಲ್ಲ, ಗುರುವಾರದಂದು ಕೆಎಸ್‌ಆರ್‌ಟಿಸಿ ಹಾಗೂ ಬಲ್ಲಾಳ್‌ಬಾಗ್ ವ್ಯಾಪ್ತಿಯಲ್ಲಿ ಸುಮಾರು 90 ಕೇಸ್ ದಾಖಲು ಮಾಡಲಾಗಿದೆ. ೧೭ ಸಾವಿರ ದಂಡ ವಿಧಿಸಲಾಗಿದೆ. ಮಾತ್ರವಲ್ಲದೇ ಈಗಾಲಗೇ ಹುಕ್ಕಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ರು. ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರರಾದ ಡಾ| ಪ್ರೀತಿ.ಸಿ.ಶೇಖರ್ ಹೇಳಿದರು.

ಇನ್ನು ಕಾರ್ಯಾಚರಣೆಯಲ್ಲಿ ಡಾ|ಜಾನ್ ಕೆನಾಡಿ , ಕಂಕನಾಡಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತೆ ಶೃತಿ ಭಾಗವಹಿಸಿದ್ರು.

Related posts

Leave a Reply