Header Ads
Header Ads
Breaking News

ರೆಡ್ ಎಫ್.ಎಂ.ವತಿಯಿಂದ ರೆಡ್ ಎಫ್.ಎಂ ಗೋ ಗ್ರೀನ್ ಜಾಗೃತಿ ಕಾರ್ಯಕ್ರಮ

 ಮಂಗಳೂರಿನ ಪ್ರತಿಷ್ಠಿತ ರೆಡ್ ಎಫ್.ಎಂ.ವತಿಯಿಂದ ತಂಬಾಕು ವಿರೋಧಿ ಪ್ರಯುಕ್ತ ರೆಡ್ ಎಫ್.ಎಂ ಗೋ ಗ್ರೀನ್ ಆಯೋಜಿಸಲಾಗಿತ್ತು. ಇನ್ನು ನಗರದ ಎಜೆ ಆಸ್ಪತ್ರೆ ಹಾಗೂ ವಿಕಾಸ್ ಕಾಲೇಜ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ರೆಡ್ ಎಫ್.ಎಂ ಇದೀಗ ಮತ್ತೊಂದು ಕಾರ್ಯಕ್ರಮವನ್ನು ನಡೆಸಿದೆ. ತಂಬಾಕುವಿನ ವಿರೋಧಿ ಜಾಗೃತಿ ಪ್ರಯುಕ್ತ ರೆಡ್ ಎಫ್.ಎಂ ಗೋ ಗ್ರೀನ್ ಆಯೋಜಿಸಿದೆ.ಶನಿವಾರದಂದು ನಗರದ ಎ.ಜೆ. ಆಸ್ಪತ್ರೆ ಮುಂಭಾಗದಲ್ಲಿ ರೆಡ್ ಎಫ್.ಎಂ ಗೋ ಗ್ರೀನ್ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು.

 

ಇನ್ನು ಗಿಡವನ್ನು ಎ.ಜೆ. ಆಸ್ಪತ್ರೆಯ ಮ್ಯಾನೆಜಿಂಗ್ ಡೈರೆಕ್ಟರ್ ಪ್ರಶಾಂತ್ ಮಾರ್ಲ ಅವರಿಗೆ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಎ.ಜೆ. ಆಸ್ಪತ್ರೆಯ ಮ್ಯಾನೆಜಿಂಗ್ ಡೈರೆಕ್ಟರ್ ಪ್ರಶಾಂತ್ ಮಾರ್ಲ ಮಾತನಾಡಿ, ತಂಬಾಕುನಿಂದ ಹಲವಾರು ರೋಗ ಬರುತ್ತಿದೆ. ಹೆಚ್ಚಾಗಿ ಯುವಕರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದರ ಬದಲು ಪರಿಸರದ ಬಗ್ಗೆ ಕಾಳಜಿ ವಹಿಸಿಕೊಳ್ಳುವಂತೆ ಸಲಹೆ ನೀಡಿದರು.ಈ ಕಾರ್ಯಕ್ರಮವನ್ನು ಆರ್.ಜೆ.ನಯನಾ ನಡೆಸಿಕೊಟ್ಟರು. ಆರ್.ಜೆಗಳಾದ ಪ್ರಸನ್ನ, ತ್ರಿಶುಲ್, ಸೇರಿದಂತೆ ರೆಡ್ ಎಫ್.ಎಂ ಸಿಬ್ಬಂದಿಗಳು ಭಾಗಿಯಾಗಿದ್ದರು.

Related posts

Leave a Reply